ನ್ಯೂಜಿಲೆಂಡ್‌ನಲ್ಲಿ ನಡೆದ ಸ್ಟೋರೇಜ್-ಯೂನಿಟ್ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಕುಟುಂಬವೊಂದು ಅಕ್ಷರಶಃ ಆಘಾತಕ್ಕೊಳಗಾಗಿದೆ. ಅದೃಷ್ಟದ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಸೂಟ್‌ಕೇಸ್‌ಗಳಲ್ಲಿ ತುಂಡರಿಸಿದ್ದ ಮಕ್ಕಳ ಮೃತದೇಹ ಪತ್ತೆಯಾಗಿದೆ.
ದಕ್ಷಿಣ ಆಕ್ಲೆಂಡ್‌ನ ಮನುರೆವಾದ ಈ ಕುಟುಂಬವೊಂದು ಆಗಸ್ಟ್ 11 ರಂದು ಹರಾಜನ್ನು ಗೆದ್ದಿತ್ತು. ಖರೀದಿದಾರರು ಹರಾಜಿಗೆ ಮುಂಚಿತವಾಗಿ ಲಾಕರ್‌ನಲ್ಲಿ ಏನಿದೆ ಅನ್ನೋದನ್ನು ನೋಡುವಂತಿಲ್ಲ. ಹಾಗಾಗಿ ಕುಟುಂಬಸ್ಥರು ಸೂಟ್‌ಕೇಸ್ ತೆಗೆದುಕೊಂಡು ಮನೆಗೆ ಬಂದಿದ್ದಾರೆ.
ಮನೆಗೆ ಬರುತ್ತಿದ್ದಂತೆ ಸೂಟ್‌ಕೇಸ್ ಓಪನ್ ಮಾಡಿದ ಅವರು ಶಾಕ್ ಆಗಿದ್ದಾರೆ. ಸೂಟ್‌ಕೇಸ್‌ನಲ್ಲಿ ಮಕ್ಕಳ ತುಂಡು ತುಂಡಾದ ಮೃತದೇಹವನ್ನು ತುಂಬಲಾಗಿತ್ತು. ಈ ಮಕ್ಕಳ ಸಾವಿಗೂ ಹರಾಜು ಗೆದ್ದಿರುವ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಐದು ಮತ್ತು ಹತ್ತು ವರ್ಷ ವಯಸ್ಸಿನ ಮಕ್ಕಳ ದೇಹಗಳು ಮೂರರಿಂದ ನಾಲ್ಕು ವರ್ಷಗಳಿಂದ ಸೂಟ್‌ಕೇಸ್‌ಗಳೊಳಗೆ ಇದ್ದಿರಬಹುದು ಅಂತಾ ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ. ಸೂಟ್‌ಕೇಸ್ ಜೊತೆಗೆ ಗೃಹೋಪಯೋಗಿ ವಸ್ತುಗಳು ಮತ್ತು ವೈಯಕ್ತಿಕ ಬಳಕೆಯ ವಸ್ತುಗಳು ಸಹ ಪತ್ತೆಯಾಗಿವೆ. ಸೂಟ್‌ಕೇಸ್‌ಗಳನ್ನು ಹೊತ್ತ ಟ್ರೇಲರ್‌ನ ಹಿಂಭಾಗದಲ್ಲಿ ‘ಪ್ರಾಮ್‌ಗಳು, ಆಟಿಕೆಗಳು ಮತ್ತು ವಾಕರ್’ ಕೂಡ ಇತ್ತು.
ಈ ಘಟನೆ ಸ್ಥಳೀಯರಲ್ಲೂ ಆತಂಕ ಮೂಡಿಸಿದೆ. ಹರಾಜಿನಲ್ಲಿ ಅದೃಷ್ಟ ಹುಡುಕಿ ಹೊರಟಿದ್ದ ಕುಟುಂಬವೀಗ ತನಿಖೆಯ ಸುಳಿಗೆ ಸಿಕ್ಕಂತಾಗಿದೆ. ಈ ಕುಟುಂಬದಲ್ಲಿ ಒಬ್ಬ ವೃದ್ಧ, ಮಹಿಳೆ ಮತ್ತು 30ರ ಹರೆಯದ ಇನ್ನೊಬ್ಬ ಪುರುಷ ಸೇರಿದಂತೆ ಮೂವರು ಸದಸ್ಯರಿದ್ದಾರೆ. ಆದ್ರೆ ಅವರ್ಯಾರೂ ಮಕ್ಕಳ ಹತ್ಯೆಯಲ್ಲಿ ಭಾಗಿಯಾಗಿಲ್ಲ ಎಂಬುದು ದೃಢಪಟ್ಟಿದೆ.