ನೈಸರ್ಗಿಕ ವಿದ್ಯಮಾನವು ಸಾಮಾನ್ಯವಾಗಿ ಜನರನ್ನು ವಿಸ್ಮಯಗೊಳಿಸುತ್ತದೆ. ಸಾಮಾನ್ಯವಾಗಿ ನೀರು ಮೇಲಿನಿಂದ ಕೆಳಗೆ ಬೀಳುತ್ತದೆ. ಆದರೆ, ನೀರಿನಿಂದ ಆವೃತವಾದ ಪ್ರದೇಶದ ನಡುವೆ ನೀರು ಮೇಲಕ್ಕೆ ಚಲಿಸುವ ವಿಚಿತ್ರ ಪ್ರಾಕೃತಿಕ ಕೌತುಕ ಕ್ಯಾಮರಾಗೆ ಸೆರೆಯಾಗಿದೆ.
ವಾಯುವ್ಯ ಫ್ಲೋರಿಡಾದಲ್ಲಿ ಮಂಗಳವಾರ ತೀವ್ರವಾದ ಗುಡುಗು ಸಹಿತ ಮಳೆಯ ವಾತಾವರಣವಿತ್ತು, ಈ ವೇಳೆ ಸುಂಟರಗಾಳಿ ಸೃಷ್ಟಿಯಾಗಿದ್ದು, ಸುತ್ತುತ್ತಾ ಬಂದ ಗಾಳಿ ನೀರನ್ನು ಮೇಲಕ್ಕೆತ್ತಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ಈ ಅದ್ಭುತ ದೃಶ್ಯವನ್ನು ಸ್ಥಳಿಯರು ಕಡಲತೀರದಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋ ಸುಂಟರಗಾಳಿ ಬಳಿ ಅನೇಕ ಮಿಂಚಿನ ಹೊಡೆತ, ಮೋಡಗಳನ್ನು ತೋರಿಸುತ್ತವೆ. ಇದನ್ನು ಕಂಡ ಜನರು ಆಶ್ಚರ್ಯಭರಿತರಾಗಿ ಕಾಮೆಂಟ್ ಮಾಡಿದ್ದಾರೆ.