ಸ್ವಾತಂತ್ರ್ಯ ದಿನಾಚರಣೆಯಂದು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿತ್ತು. ಶಾಲಾ-ಕಾಲೇಜು ಹೊರತುಪಡಿಸಿ ಸರ್ಕಾರಿ ಕಚೇರಿ ಪೊಲೀಸ್ ಠಾಣೆಯಲ್ಲೂ ಭಿನ್ನ-ವಿಭಿನ್ನ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸೇರಿಂತೆ ಎಲ್ಲರೂ ಭರ್ಜರಿಯಾಗಿಯೇ ಸ್ವತಂತ್ರ ಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಈ ನಡುವೆ ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯುಪಿ ಪೊಲೀಸರು ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. ಅದು ಕೂಡಾ ’ನಾಗಿನ್.. ನಾಗಿನ್..’ ಹಾಡಿಗೆ.
ಉತ್ತರ ಪ್ರದೇಶದ ಪಿಲಿಭಿತ್ನ ಪೊಲೀಸ್ ಠಾಣೆಯೊಂದರ ವಿಡಿಯೋ ಇದಾಗಿದ್ದು, ಈ ವಿಡಿಯೋದಲ್ಲಿ ಪಿಲಿಭಿತ್ನ ಇನ್ಸ್ಪೆಕ್ಟರ್ ಪುಂಗಿ ನುಡಿಸುವಂತೆ ನಟಿಸಿದ್ದಾರೆ. ಆಗಲೇ ಅಲ್ಲಿ ‘ನಾಗಿನ್’ ಹಾಡು ಹಾಕಲಾಗಿದೆ. ಆಗ ಪೊಲೀಸ್ ಪೇದೆಯೊಬ್ಬರು ತಡಮಾಡದೇ ಫುಲ್ ಜೋಶ್ನಿಂದ ನಾಗಿನ್ ಅಂದ್ರೆ ನಾಗ ಕನ್ಯೆಯಂತೆ ನೃತ್ಯ ಮಾಡಿದ್ದಾರೆ. ಈ ವೇಳೆ ಅಲ್ಲಿದ್ದ ಎಲ್ಲ ಪೊಲೀಸರೂ ‘ನಾಗಿನ್ ಡ್ಯಾನ್ಸ್’ ಎಂಜಾಯ್ ಮಾಡುತ್ತಿರುವುದು ನೋಡಬಹುದಾಗಿದೆ.
ಆದರೆ, ಈ ನೃತ್ಯವನ್ನು ಮಾಡಿದ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಇಬ್ಬರು ಪೊಲೀಸರಿಗೆ ತರಾಟೆ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆಯನ್ನೂ ನೀಡಲಾಗಿದೆ.
ಧ್ವಜಾರೋಹಣದ ನಂತರ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ನಾಗಿನ್ ಡಾನ್ಸ್ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಆಗಸ್ಟ್ 15 ರಂದು ಅಂದರೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಧ್ವಜಾರೋಹಣ ಮಾಡಿದ ತಕ್ಷಣ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಕಾನ್ ಸ್ಟೇಬಲ್ ಸೌರವ್ ಕುಮಾರ್ ಮತ್ತು ಕಾನ್ ಸ್ಟೇಬಲ್ ಅನುಜ್ ಕುಮಾರ್ ನೃತ್ಯ ಮಾಡಲು ಪ್ರಾರಂಭಿಸಿದರು. ಪುಂಗಿ ನಾದದಲ್ಲಿ ಇನ್ಸ್ಪೆಕ್ಟರ್ ಮತ್ತು ಕಾನ್ ಸ್ಟೇಬಲ್ ನಾಗಿಣಿ ನೃತ್ಯ ಮಾಡಲು ಹೆಚ್ಚಿನ ಬೆಂಬಲ ಪಡೆದಿದ್ದಾರೆ. ಅಲ್ಲಿದ್ದ ಪೊಲೀಸರು ಚಪ್ಪಾಳೆ ತಟ್ಟುವ ಮೂಲಕ ಇವರಿಬ್ಬರನ್ನು ಪ್ರೋತ್ಸಾಹಿಸಿರುವುದು ಕಂಡು ಬಂದಿದೆ. ಈ ವೇಳೆ ಸ್ಥಳದಲ್ಲಿದ್ದ ಯಾರೋ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಸಮವಸ್ತ್ರದಲ್ಲಿ ಸರ್ಪ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಎಸ್ಪಿ ದಿನೇಶ್ ಪಿ ವಿಷಯ ಪರಿಶೀಲಿಸಿದ್ದಾರೆ. ಇನ್ಸ್ಪೆಕ್ಟರ್ ಸೌರಭ್ ಕುಮಾರ್ ಮತ್ತು ಕಾನ್ ಸ್ಟೇಬಲ್ ಅನುಜ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಇಡೀ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಪುರನ್ಪುರ ವೃತ್ತದ ಅಧಿಕಾರಿ ವೀರೇಂದ್ರ ವಿಕ್ರಮ್ ಸಿಂಗ್ ಅವರಿಗೆ ಎಸ್ಪಿ ಸೂಚನೆ ನೀಡಿದ್ದಾರೆ.