ಇಡೀ ದೇಶವೇ 75 ಸ್ವಾತಂತ್ರ್ಯ ಹಬ್ಬದವನ್ನ ಭರ್ಜರಿಯಾಗಿ ಆಚರಿಸ್ತಾ ಇತ್ತು. ಆದರೆ ಅದೇ ದಿನ ಆಂಧ್ರಪದೇಶದ ಕರ್ನೂಲ್ ಜಿಲ್ಲೆಯ ಶಾಲೆಯೊಂದರಲ್ಲಿ ಅವಘಡ ಸಂಭವಿಸಿದೆ. ಇಲ್ಲಿನ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನ ಹಾರಿಸುವಾಗ ಇಬ್ಬರು ವಿದ್ಯಾರ್ಥಿಗಳು ವಿದ್ಯುತ್ ಸ್ಪರ್ಶಿಸಿ ಗಾಯಗೊಂಡಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವೆಸ್ಲಿ ಎಂಬ ಶಾಲೆಯಲ್ಲಿ ಧ್ವಜಾರೋಹಣ ಸಮಾರಂಭದಲ್ಲಿ ಈ ವಿದ್ಯುತ್ ಅವಘಢ ಸಂಭವಿಸಿ ವಿದ್ಯಾರ್ಥಿಗಳಿಬ್ಬರು ತೀವ್ರ ಗಾಯಗೊಂಡಿದ್ದು, ಅವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲವೇ ಕೆಲ ದಿನಗಳ ಹಿಂದಿನ ಮಾತು ಸ್ವಾತಂತ್ರ್ಯ ದಿನಾಚರಣೆಯ ಪೂರ್ವಾಭ್ಯಾಸದ ಸಮಯದಲ್ಲಿ, ಧ್ವಜದ ಕಂಬಕ್ಕೆ 11 ಕಿಲೋವ್ಯಾಟ್ ವಿದ್ಯುತ್ ತಂತಿ ತಗುಲಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದರು.