alex Certify ಲ್ಯಾಪ್ಸ್‌ ಆದ LIC ಪಾಲಿಸಿ ಪುನರುಜ್ಜೀವನಗೊಳಿಸಲು ವಿಶೇಷ ಅಭಿಯಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲ್ಯಾಪ್ಸ್‌ ಆದ LIC ಪಾಲಿಸಿ ಪುನರುಜ್ಜೀವನಗೊಳಿಸಲು ವಿಶೇಷ ಅಭಿಯಾನ

ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು ಪಾಲಿಸಿದಾರರಿಗಾಗಿ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನವು ಪಾಲಿಸಿದಾರರಿಗೆ ಲ್ಯಾಪ್ಸ್ ಆದ LIC ಪಾಲಿಸಿಗಳನ್ನು ಪುನರುಜ್ಜೀವನಗೊಳಿಸಲು ಅವಕಾಶ ನೀಡಲಿದೆ. ವಿಶೇಷ ಅಭಿಯಾನವು ಎಲ್ಲಾ ನಾನ್‌-ಯುಲಿಪ್ ಪಾಲಿಸಿಗಳನ್ನು ಒಳಗೊಂಡಿದೆ. ಲ್ಯಾಪ್ಸ್ ಆದ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸಲು ವಿಮಾದಾರರು ವಿಳಂಬ ಶುಲ್ಕದ ಮೇಲೆ ರಿಯಾಯಿತಿಗಳನ್ನು ಸಹ ನೀಡುತ್ತಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಪ್ರೀಮಿಯಂಗಳನ್ನು ಪಾವತಿಸಲು ಸಾಧ್ಯವಾಗದೇ ಪಾಲಿಸಿ ಲ್ಯಾಪ್ಸ್‌ ಆಗಿದ್ದರೆ ಅಥವಾ ಪಾಲಿಸಿ ಕಳೆದು ಹೋಗಿದ್ದರೆ ಅಂಥವರು ಈ ಅಭಿಯಾನದ ಲಾಭ ಪಡೆದುಕೊಳ್ಳಬಹುದು. ಈ ವಿಶೇಷ ಅಭಿಯಾನ ಅಕ್ಟೋಬರ್ 21 ರಂದು ಅಂತ್ಯವಾಗಲಿದೆ. ಈ ಬಗ್ಗೆ LIC ಟ್ವೀಟ್‌ ಮೂಲಕ ಪ್ರಕಟಣೆ ಹೊರಡಿಸಿದೆ.

ಯುಲಿಪ್ ಪಾಲಿಸಿಗಳನ್ನು ಹೊರತುಪಡಿಸಿ ಈ ವಿಶೇಷ ಪುನರುಜ್ಜೀವನ ಅಭಿಯಾನದ ಅಡಿಯಲ್ಲಿ, ಪಾಲಿಸಿ ಷರತ್ತುಗಳಿಗೆ ಒಳಪಟ್ಟು ಮೊದಲು  ಪಾವತಿಸದ ಪ್ರೀಮಿಯಂ ದಿನಾಂಕದಿಂದ 5 ವರ್ಷಗಳಲ್ಲಿ ಎಲ್ಲಾ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸಬಹುದು. ಮೈಕ್ರೋ ಇನ್ಶೂರೆನ್ಸ್ ಪಾಲಿಸಿಗಳಿಗೆ ವಿಳಂಬ ಶುಲ್ಕದ 100 ಪ್ರತಿಶತದಷ್ಟು ಮನ್ನಾ ಇರುವುದಾಗಿಯೂ ಎಲ್‌ಐಸಿ ತಿಳಿಸಿದೆ. ಆದಾಗ್ಯೂ, ವೈದ್ಯಕೀಯ ಅವಶ್ಯಕತೆಗಳಲ್ಲಿ ಯಾವುದೇ ರಿಯಾಯಿತಿಗಳಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...