ಲೂಯಿಸ್ವಿಲ್ಲೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಆಮಿ ಕ್ಲೂಕಿ ತನ್ನ ತಂದೆಯ ನಿಧನದ ಒಂಭತ್ತು ವರ್ಷದ ಬಳಿಕ ಅವರು ಬರೆದ ಪತ್ರವನ್ನು ಕಂಡುಕೊಂಡಿದ್ದು, ಅದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಆಕೆಯ ತಂದೆ ಸಾವಿಗೂ ಮುನ್ನ ಜೇನುಸಾಕಣೆ ಮಾಡುತ್ತಿದ್ದರು, ಜುಲೈ 27, 2012 ರಂದು ಆಮಿಯ ತಂದೆ ಬರೆದಿದ್ದ ಪತ್ರದಲ್ಲಿ ತನ್ನ ಮಕ್ಕಳಲ್ಲಿ ಜೇನುಸಾಕಣೆಯ ಬಗ್ಗೆ ಕುತೂಹಲ ಹುಟ್ಟುಹಾಕುವ ಅಂಶ ಪ್ರಸ್ತಾಪಿಸಿದ್ದಾರೆ.
ಜೇನುಸಾಕಣೆಯ ಬಗ್ಗೆ ಕುತೂಹಲ ಹೊಂದಿರುವ ನನ್ನ ಮಕ್ಕಳಲ್ಲಿ ಒಬ್ಬರಿಗೆ ಈ ಪತ್ರ ಕೈಸೇರಿದೆಯೆಂದು ನಾನು ಭಾವಿಸುತ್ತೇನೆ ಎಂದು ಒಕ್ಕಣೆ ಇದ್ದು, ಜೇನುಸಾಕಣೆಯು ಬಹಳ ಸುಲಭ ಎಂಬುದರ ಕುರಿತು ಬರೆದಿದ್ದಾರೆ.
ಆನ್ಲೈನ್ನಲ್ಲಿ ಅದರ ಬಗ್ಗೆ ಕಲಿಯಬಹುದು. ಜೇನುನೊಣಗಳು ಕೇವಲ ಜೇನುತುಪ್ಪಕ್ಕಿಂತ ಹೆಚ್ಚಿನ ಉತ್ಪನ್ನಗಳನ್ನು ತಯಾರಿಸುತ್ತವೆ ಹವ್ಯಾಸವಾಗಿ, ಇದು ಹೆಚ್ಚುವರಿ ಆದಾಯದ ಮೂಲವೂ ಆಗಿದೆ. ಆದ್ದರಿಂದ ಭಯಪಡಬೇಡಿ, ಧೈರ್ಯದಿಂದಿರಿ ಶುಭವಾಗಲಿ ಎಂದಿದೆ. ಲವ್ ಡ್ಯಾಡ್ ಎಂದು ಕೊನೆಯಲ್ಲಿ ಬರೆದು ಸಹಿ ಹಾಕಿದ್ದಾರೆ.
ಟ್ವಿಟರ್ನಲ್ಲಿ ಈ ಟಿಪ್ಪಣಿಯನ್ನು ಹಂಚಿಕೊಂಡ ಆಮಿ, ನನ್ನ ತಂದೆಯ ನೋಟ್ ಅವರ ಮರಣದ ಒಂಬತ್ತು ವರ್ಷಗಳ ನಂತರ ಅವರ ಜೇನುಸಾಕಣೆಯ ಉಪಕರಣದಲ್ಲಿ ಕಂಡುಬಂದಿದೆ ಎಂದು ಎರಡು ಸಾಲು ಬರೆದಿದ್ದಾರೆ. ಇನ್ನೊಂದು ಪೋಸ್ಟ್ನಲ್ಲಿ ಈ ಪೋಸ್ಟ್ ಇಷ್ಟೊಂದು ಗಮನ ಸೆಳೆಯುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದು ತಂದೆಯ ಜತೆಗೆ ಇರುವ ಫೋಟೋವನ್ನೂ ಆಕೆ ಪೋಸ್ಟ್ ಮಾಡಿದ್ದಾರೆ. ಅವರ ಪತ್ರವು 1 ಲಕ್ಷಕ್ಕೂ ಹೆಚ್ಚು ಲೈಕ್ ಗಳಿಸಿದೆ. ನೂರಾರು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
https://twitter.com/AmyClukey/status/1559276336144957444?ref_src=twsrc%5Etfw%7Ctwcamp%5Etweetembed%7Ctwterm%5E1559369946391629824%7Ctwgr%5E3992857eedfef761bfc7891a4476dc690b0c0046%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fwoman-finds-note-by-father-9-years-after-his-demise-heres-what-was-written-in-it-5758501.html
https://twitter.com/AmyClukey/status/1559369946391629824?ref_src=twsrc%5Etfw%7Ctwcamp%5Etweetembed%7Ctwterm%5E1559369946391629824%7Ctwgr%5E3992857eedfef761bfc7891a4476dc690b0c0046%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwoman-finds-note-by-father-9-years-after-his-demise-heres-what-was-written-in-it-5758501.html