alex Certify ಅನಾರೋಗ್ಯ ಪೀಡಿತ ವೃದ್ದ ಪತ್ನಿಯನ್ನು ನೋಡಿಕೊಳ್ಳುವ ಪತಿ…! ಇದೇ ಅಲ್ಲವೇ ನಿಜವಾದ ʼಪ್ರೀತಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಾರೋಗ್ಯ ಪೀಡಿತ ವೃದ್ದ ಪತ್ನಿಯನ್ನು ನೋಡಿಕೊಳ್ಳುವ ಪತಿ…! ಇದೇ ಅಲ್ಲವೇ ನಿಜವಾದ ʼಪ್ರೀತಿʼ

ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿ ವಿಶೇಷ ಸಂಗತಿಯ ವಿಡಿಯೋಗಳು ವೈರಲ್​ ಆಗುತ್ತವೆ. ಇದೀಗ ಅನಾರೋಗ್ಯ ಪೀಡಿತ ಹೆಂಡತಿಯನ್ನು ಗಂಡ ಪ್ರೀತಿಯಿಂದ ನೋಡಿಕೊಳ್ಳುವ ವಿಡಿಯೋ ನೆಟ್ಟಿಗರ ಮನಸ್ಸು ಬೆಚ್ಚಗಾಗಿಸಿದೆ.

ಪತಿಯು ಆಸ್ಪತ್ರೆಯಲ್ಲಿ ಬೆಡ್​ ಮೇಲೆ ಕುಳಿತಿರುವ ತನ್ನ ಹೆಂಡತಿಯ ತಲೆ ಕೂದಲನ್ನು ಬಾಚುವುದನ್ನು ಅನಾಮಿಕ ವ್ಯಕ್ತಿ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಮಹಿಳೆ ಅಸ್ವಸ್ಥರಾಗಿರುವಂತೆ ಕಾಣಿಸುತ್ತದೆ. ಪತಿ ಆಕೆಯನ್ನು ಅತ್ಯಂತ ಕಾಳಜಿಯಿಂದ ನಡೆಸಿಕೊಳ್ಳುತ್ತಾ ತನ್ನೆಲ್ಲ ಪ್ರೀತಿಯನ್ನು ಧಾರೆ ಎರೆಯುತ್ತಾರೆ.

ಈ ಮುದ್ದಾದ ವಿಡಿಯೋ ನೋಡಿದ ನೆಟ್ಟಿಗರು ದಂಪತಿಯನ್ನು ಹೊಗಳಿದ್ದಾರೆ. ಭಾನುವಾರದಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಮತ್ತು ಇಲ್ಲಿಯವರೆಗೆ, ಇದು 1.9 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನನಗೂ ಇದು ಬೇಕು, ಅವರ ಪ್ರೀತಿ ಎಲ್ಲೆ ಮೀರಿದೆ. ಅವರ ಪ್ರಿಯತಮೆ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಒಬ್ಬರು ಹಾರೈಸಿದ್ದಾರೆ.

ಅವರ ಪ್ರೀತಿಯ ಪರಿಶುದ್ಧತೆಯು ಅವರಿಬ್ಬರ ಬಂಧನವನ್ನು ಪ್ರತಿಬಿಂಬಿಸುತ್ತದೆ. ಆ ಮಹಿಳೆ ಬೇಗ ಗುಣಮುಖಳಾಗಿ ಮನೆಗೆ ಮರಳಲಿ ಎಂದು ಹಾರೈಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...