alex Certify ‘ಜನ್ಮಾಷ್ಟಮಿ’ಯಂದು ಮನೆಯಲ್ಲಿರಲಿ ಈ ವಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜನ್ಮಾಷ್ಟಮಿ’ಯಂದು ಮನೆಯಲ್ಲಿರಲಿ ಈ ವಸ್ತು

ಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ನಡೆಯುತ್ತಿದೆ, ಭಗವಂತ ಕೃಷ್ಣನ ಪೂಜೆಯ ಜೊತೆಗೆ ಕೆಲವೊಂದು ಅವಶ್ಯ ಕೆಲಸಗಳನ್ನು ಈ ದಿನ ಮಾಡಬೇಕು. ಮನೆಯಲ್ಲಿ ಕೃಷ್ಣ ಜನ್ಮಾಷ್ಠಮಿಯಂದು ಈ ವಸ್ತುಗಳು ಇರಲೇಬೇಕು.

ದೇಸಿ ಹಸುವಿನ ತುಪ್ಪ : ಹಸುವೆಂದ್ರೆ ಕೇಶವನಿಗೆ ಬಹಳ ಪ್ರೀತಿ. ಕೃಷ್ಣ ಜನ್ಮಾಷ್ಠಮಿಯ ದಿನ ಹಸುವಿನ ಹಾಲಿನಿಂದ ಮಾಡಿದ ತುಪ್ಪವನ್ನು ಘನಶ್ಯಾಮನಿಗೆ ಅರ್ಪಣೆ ಮಾಡಿ. ಅದನ್ನು ಮನೆಯಲ್ಲಿ ಸದಾ ಇಟ್ಟುಕೊಳ್ಳಿ.

ಶ್ರೀಗಂಧ : ಶ್ರೀಗಂಧದ ತಿಲಕವನ್ನು ಹಚ್ಚಿಕೊಳ್ಳುವುದರಿಂದ ಪಾಪಗಳು ನಾಶವಾಗುತ್ತವೆ. ಇದರ ಸುವಾಸನೆಯಿಂದ ಧನಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶ ಮಾಡುತ್ತವೆ. ಗೋಕುಲಾಷ್ಟಮಿಯ ದಿನ ಶ್ರೀಕೃಷ್ಣನಿಗೆ ಶ್ರೀಗಂಧದ ತಿಲಕವನ್ನಿಡಿ.

ಕೊಳಲು : ಮುರಳಿ ಲೋಲ ಎಂದೆ ಹೆಸರು ಪಡೆದವನು ಶ್ರೀಕೃಷ್ಣ. ಕೊಳಲೆಂದ್ರೆ ಪಾಂಡುರಂಗನಿಗೆ ಪಂಚಪ್ರಾಣ. ಮನೆಯಲ್ಲಿ ಕೊಳಲಿದ್ದರೆ ಹಣ ಮತ್ತು ಪ್ರೀತಿಗೆ ಎಂದೂ ಕೊರತೆ ಇರುವುದಿಲ್ಲ.

ಬೆಣ್ಣೆ–ಸಕ್ಕರೆ : ಕೃಷ್ಣ ಜನ್ಮಾಷ್ಟಮಿಯಂದು ಬೆಣ್ಣೆ, ಸಕ್ಕರೆಯನ್ನು ಅವಶ್ಯವಾಗಿ ಇಡಿ. ಮನೆಯಲ್ಲಿಯೇ ಬೆಣ್ಣೆ ತಯಾರಿಸಲು ಸಾಧ್ಯವಾದಲ್ಲಿ ಮನೆಯಲ್ಲಿಯೇ ಬೆಣ್ಣೆ ಸಿದ್ಧಪಡಿಸಿ. ಇಲ್ಲವಾದ್ರೆ ಮಾರುಕಟ್ಟೆಯಿಂದ ಬೆಣ್ಣೆಯನ್ನು ಮನೆಗೆ ತನ್ನಿ. ಬೆಣ್ಣೆ– ಸಕ್ಕರೆ ಸೇರಿಸಿ ಮಾಡಿದ ಮಿಠಾಯಿ ವಿಠಲನಿಗೆ ಬಹಳ ಪ್ರಿಯ.

ಪಂಚಾಮೃತ : ತುಳಸಿ, ಜೇನು, ಹಾಲು, ತುಪ್ಪ ಹಾಗೂ ಗಂಗಾಜಲ ಸೇರಿಸಿ ಪಂಚಾಮೃತ ಸಿದ್ಧಪಡಿಸಿ. ಈ ಪಂಚಾಮೃತವನ್ನು ಭಗವಾನ್ ಕೃಷ್ಣನಿಗೆ ಅರ್ಪಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...