ನವದೆಹಲಿ: ಛತ್ತೀಸ್‌ಗಢ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ(ಡಿಎ) ಹೆಚ್ಚಿಸಿದೆ ಎಂದು ಮಂಗಳವಾರ ಪ್ರಕಟಿಸಿದೆ.
7 ನೇ ವೇತನ ಆಯೋಗದ ಅಡಿಯಲ್ಲಿ ಉದ್ಯೋಗಿಗಳಿಗೆ 6% ರಿಂದ 28% ರಷ್ಟು ಮತ್ತು 6 ನೇ ವೇತನ ಆಯೋಗದ ಅಡಿಯಲ್ಲಿ 15% ರಿಂದ 189% ರಷ್ಟು ಡಿಎ ಹೆಚ್ಚಿಸಲಾಗಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಹೆಚ್ಚಳವು ಆಗಸ್ಟ್ 1, 2022 ರಂದು ಜಾರಿಗೆ ಬರಲಿದೆ.
ಅಧಿಸೂಚನೆಯ ಪ್ರಕಾರ, ರಾಜ್ಯ ಸರ್ಕಾರಿ ನೌಕರರು ಮೇ 2022 ರಿಂದ 7 ನೇ ವೇತನ ಆಯೋಗದ ಅಡಿಯಲ್ಲಿ 22% ಮತ್ತು 6 ನೇ ವೇತನ ಆಯೋಗದ ಅಡಿಯಲ್ಲಿ 174% ತುಟ್ಟಿ ಭತ್ಯೆಯನ್ನು ಪಡೆಯುತ್ತಿದ್ದಾರೆ. ಪರಿಷ್ಕೃತ ಡಿಎಯನ್ನು ಆಗಸ್ಟ್ 1, 2022 ರಿಂದ ಪಾವತಿಸಲಾಗುವುದು. ಡಿಎ ಮೂಲ ವೇತನದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಇದು ವಿಶೇಷ ಮತ್ತು ವೈಯಕ್ತಿಕ ಭತ್ಯೆಗಳನ್ನು ಒಳಗೊಂಡಿರುವುದಿಲ್ಲ. ಡಿಎ ಮೊತ್ತ 50 ಪೈಸೆ ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಅದು ಹತ್ತಿರದ ರೂಪಾಯಿಗೆ ಪೂರ್ಣಗೊಳ್ಳುತ್ತದೆ. 50 ಪೈಸೆಗಿಂತ ಕಡಿಮೆ ಮೊತ್ತಕ್ಕೆ ವಿನಾಯಿತಿ ಇರುತ್ತದೆ.
ಈ ಹೆಚ್ಚಳದಿಂದ ಕನಿಷ್ಠ 3.8 ಲಕ್ಷ ರಾಜ್ಯ ಸರ್ಕಾರಿ ನೌಕರರಿಗೆ ಲಾಭವಾಗಲಿದೆ ಮತ್ತು ಪ್ರತಿ ವರ್ಷ ಬೊಕ್ಕಸಕ್ಕೆ 2,160 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.