ಬೆಂಗಳೂರು: ವಾಹನ ಸವಾರರಿಗೆ ಸಿಹಿ ಸುದ್ದಿ ಇಲ್ಲಿದೆ. ಚಾಲನೆಗೆ ತಕ್ಕಂತೆ ಪ್ರೀಮಿಯಂ ಪಾವತಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ.
ಡಿಜಿಟ್ ಜನರಲ್ ಇನ್ಸೂರೆನ್ಸ್ ಕಂಪನಿಯು ಗ್ರಾಹಕರಿಗೆ ಹೊಸ ವಿಮೆ ಯೋಜನೆ ಪರಿಚಯಿಸಿದ್ದು, ನೀವು ನಿಮ್ಮ ವಾಹನವನ್ನು ಎಷ್ಟು ಡ್ರೈವ್ ಮಾಡುವಿರೋ ಅದರ ಅನುಸಾರ ಪ್ರೀಮಿಯಂ ಪಾವತಿಸಬಹುದಾಗಿದೆ. ಇದು ದೇಶದಲ್ಲಿ ಆರಂಭವಾದ ಮೊದಲ ವಿನೂತನ ಯೋಜನೆಯಾಗಿದ್ದು, ಗ್ರಾಹಕರು ತಮ್ಮ ವಾಹನ ಚಾಲನೆಯಾದಷ್ಟು ಅನುಸಾರ ಪ್ರೀಮಿಯಂ ಪಾವತಿಸಬಹುದಾಗಿದೆ.