ಅಡುಗೆಮನೆಯಲ್ಲಿ ಜಿರಳೆಗಳ ಕಾಟ ತಪ್ಪಿದ್ದಲ್ಲ. ಇವು ಅಸಹ್ಯ ಹುಟ್ಟಿಸುವ ಜೊತೆಗೆ ನಮ್ಮನ್ನು ನಿಮ್ಮನ್ನು ಅಸ್ವಸ್ಥಗೊಳಿಸಬಹುದು. ಅಡುಗೆಮನೆಯಲ್ಲಿ ಜಿರಳೆಗಳಿದ್ದರೆ ಮೊದಲು ಅವುಗಳನ್ನು ಓಡಿಸಲು ಪ್ರಯತ್ನಿಸಿ. ಜಿರಳೆಗಳಿಂದ ಮುಕ್ತಿ ಪಡೆಯಲು ಸುಲಭದ ಮನೆಮದ್ದುಗಳಿವೆ.
ಸೀಮೆಎಣ್ಣೆ: ಜಿರಳೆಗಳನ್ನು ಓಡಿಸಲು ಸೀಮೆಎಣ್ಣೆ ಬಳಸಬಹುದು. ಯಾವ್ಯಾವ ಮೂಲೆಯಲ್ಲಿ ಜಿರಳೆಗಳು ಇವೆ ಅನ್ನೋದನ್ನು ಪತ್ತೆ ಮಾಡಿಕೊಳ್ಳಿ. ಅಲ್ಲಿ ಸೀಮೆಎಣ್ಣೆಯನ್ನು ಸಿಂಪಡಿಸಿ. ಸೀಮೆ ಎಣ್ಣೆಯ ವಾಸನೆಗೆ ಜಿರಳೆಗಳು ಅಡುಗೆ ಮನೆಯಿಂದ ಓಡಿಹೋಗುತ್ತವೆ. ಕೆರೋಸಿನ್ ಹಾಕುವಾಗ ಕೈಗಳಿಗೆ ಗ್ಲೌಸ್ ಧರಿಸಬೇಕು.
ಬೇವಿನ ಎಲೆಗಳು: ಮನೆಯಿಂದ ಜಿರಳೆಗಳನ್ನು ಓಡಿಸಲು ಬೇವಿನ ಎಲೆಗಳನ್ನು ಬಳಕೆ ಮಾಡಬೇಕು. ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಜಿರಳೆಗಳಿರುವ ಎಲ್ಲಾ ಮೂಲೆಗಳಿಗೂ ಸಿಂಪಡಿಸಿ. ಹೀಗೆ ಮಾಡುವುದರಿಂದ ಜಿರಳೆಗಳ ಕಾಟ ತಪ್ಪುತ್ತದೆ.
ಅಡುಗೆ ಸೋಡಾ: ಮನೆಯಿಂದ ಜಿರಳೆಗಳನ್ನು ತೊಡೆದು ಹಾಕಲು ಅಡುಗೆ ಸೋಡಾ ಕೂಡ ತುಂಬಾ ಉಪಯುಕ್ತವಾಗಿದೆ. ಜಿರಳೆಗಳ ಕಾಟ ಹೆಚ್ಚಾಗಿದ್ದರೆ ಅಡುಗೆ ಸೋಡಾಕ್ಕೆ ಸಕ್ಕರೆಯನ್ನು ಬೆರೆಸಿ ಅದನ್ನು ಜಿರಳೆಗಳಿರುವ ಜಾಗಗಳಿಗೆ ಹಾಕಿ. ಸಕ್ಕರೆ ಜಿರಳೆಗಳನ್ನು ಆಕರ್ಷಿಸುತ್ತದೆ ಆದರೆ ಅಡುಗೆ ಸೋಡಾದ ಜೊತೆಗೆ ಬೆರೆಸಿರುವುದರಿಂದ ಜಿರಳೆಗಳಿಗೆ ಅದು ವಿಷವಾಗುತ್ತದೆ. ಅದನ್ನು ತಿಂದರೆ ಅವು ಸಾಯುತ್ತವೆ.