alex Certify ಭೂಮಿಯಿಂದ 30 ಕಿ.ಮೀ. ಎತ್ತರದಲ್ಲಿ ಹಾರಾಡಿದ ತ್ರಿವರ್ಣ ಧ್ವಜ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಮಿಯಿಂದ 30 ಕಿ.ಮೀ. ಎತ್ತರದಲ್ಲಿ ಹಾರಾಡಿದ ತ್ರಿವರ್ಣ ಧ್ವಜ

ಮಕ್ಕಳಿಗೆ ಬಾಹ್ಯಾಕಾಶ ವಿಜ್ಞಾನವನ್ನು ಉತ್ತೇಜಿಸಲು ಹೆಸರುವಾಸಿಯಾದ ಸಂಸ್ಥೆಯಾದ ಸ್ಪೇಸ್​ ಕಿಡ್ಜ್​ ಇಂಡಿಯಾ ಭಾರತೀಯ ತ್ರಿವರ್ಣ ಧ್ವಜವನ್ನು ಭೂಮಿಯಿಂದ ಸುಮಾರು 30 ಕಿಲೋಮೀಟರ್​ ಎತ್ತರದಲ್ಲಿ ಹಾರಿಸಿದೆ.

ʼಹರ್​ ಘರ್​ ತಿರಂಗಾʼ ಅಭಿಯಾನದ ಭಾಗವಾಗಿ ನಡೆದ ಈ ಪ್ರಯತ್ನ ವಿಶ್ವದ ಗಮನ ಸೆಳೆದಿದೆ. ಧ್ವಜವನ್ನು ಬಲೂನ್​ ನಲ್ಲಿ ಭೂಮಿಯಿಂದ 1,06,000 ಅಡಿ ಎತ್ತರಕ್ಕೆ ಕಳುಹಿಸಲಾಯಿತು.

“ಭೂಮಿಯ ಮೇಲೆ ಧ್ವಜವನ್ನು ಹಾರಾಡಿಸುವುದು ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸೂಚಿಸುತ್ತದೆ ಮತ್ತು ಪ್ರತಿದಿನ ಭಾರತವನ್ನು ಹೆಮ್ಮೆಪಡುವಂತೆ ಮಾಡಲು ಕೆಲಸ ಮಾಡುತ್ತಿರುವವರಿಗಾಗಿ ಈ ಪ್ರಯತ್ನ” ಎಂದು ಎಂದು ಸಂಸ್ಥೆಯು ಹೇಳಿಕೊಂಡಿದೆ.

ಸ್ಪೇಸ್​ ಕಿಡ್ಜ್​ ಇಂಡಿಯಾ ಇತ್ತೀಚೆಗೆ ಉಪಗ್ರಹವನ್ನು ಕಕ್ಷೆಗೆ ಉಡಾಯಿಸಿತು. ಈ ಮಧ್ಯೆ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುತಿಸಲು ಬಾಹ್ಯಾಕಾಶದಿಂದ ಸಂದೇಶಗಳು ಹರಿದುಬರುತ್ತಿವೆ, ಐಎಸ್​ಎಸ್​ನಲಿರುವ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟ್ಟಿ ಅವರು ವಿಡಿಯೊದಲ್ಲಿ “75 ನೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ಭಾರತವನ್ನು ಅಭಿನಂದಿಸಲು ಸಂತೋಷವಾಗಿದೆ. ದಶಕಗಳಿಂದ ಅಂತರರಾಷ್ಟ್ರೀಯ ಸಂಸ್ಥೆಗಳು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಂದಿಗೆ ಬಾಹ್ಯಾಕಾಶ ಮತ್ತು ವಿಜ್ಞಾನ ಮಿಷನ್​ಗಳಲ್ಲಿ ಕೆಲಸ ಮಾಡಿದ್ದೇವೆ” ಎಂದು ಸಂದೇಶ ಕಳಿಸಿದ್ದಾರೆ.

ಭಾರತೀಯ- ಅಮೆರಿಕನ್​ ಗಗನಯಾತ್ರಿ ರಾಜಾಚಾರಿ ಭಾರತವನ್ನು ಅಭಿನಂದಿಸಿದ್ದಾರೆ ಮತ್ತು “ನಾಸಾ ಮತ್ತು ಇಸ್ರೋ ಸಹಕಾರದ ಸುದೀರ್ಘ ಇತಿಹಾಸವನ್ನು ಹೊಂದಿವೆ, ನಾವು ಜಂಟಿ ಬಾಹ್ಯಾಕಾಶ ಮತ್ತು ಭೂ ವಿಜ್ಞಾನ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಸಹಕಾರವು ಇಂದಿಗೂ ಮುಂದುವರಿಯುತ್ತದೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...