ನೈಜೀರಿಯಾ ಮೂಲದ ಯುವತಿಯೊಬ್ಬರು ಭಾರತೀಯ ವಧುವಿನ ಮೇಕ್ ಓವರ್ ಪ್ರದರ್ಶಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಕ್ಲಿಪ್ ಅನ್ನು ಪಂಜಾಬ್ನ ನೇಹಾ ವಾರೆಚ್ ಗ್ರೋವರ್ ಎಂಬ ಮೇಕಪ್ ಕಲಾವಿದರು ಹಂಚಿಕೊಂಡಿದ್ದಾರೆ. ಯುವತಿ ಹೆಸರನ್ನು ಬಹಿರಂಗಪಡಿಸಲಾಗಿಲ್ಲ, ವಿಡಿಯೊದ ಆರಂಭಿಕ ಭಾಗಗಳಲ್ಲಿ ಕಂಡುಬರುವಂತೆ,
ಆಕೆ ಕಸೂತಿ ಮಾಡಿದ ಲೆಹೆಂಗಾವನ್ನು ಧರಿಸಿರುವುದು ಕಂಡುಬರುತ್ತದೆ. ಆಕೆಯ ಕೈಗಳಿಗೆ ಕೆಂಪು ಬಣ್ಣದ ಬಳೆಗಳನ್ನು ತೊಟ್ಟಿದ್ದು, ಅಲಂಕಾರಿಕ ಆಭರಣಗಳು, ಮೇಕಪ್ ಮತ್ತು ಹೂವಿನ ಹಾರದಿಂದ ಸಜ್ಜುಗೊಳಿಸುವುದು ನೋಡಬಹುದಾಗಿದೆ.
ಭಾರತೀಯ ವಧುವಾಗಿ ಆಫ್ರಿಕನ್ ಮಾಡೆಲ್ನಲ್ಲಿ ತನ್ನ ಮೇಕ್ ಓವರ್ ಕೌಶಲ್ಯ ತೋರಿಸುವುದು ತನ್ನ ಕನಸಾಗಿತ್ತು ಎಂದು ನೇಹಾ ಬರೆದಿದ್ದಾರೆ. ಈ ಪ್ರಯತ್ನಕ್ಕಾಗಿ ನಾನು ಆಫ್ರಿಕನ್ ಮಾಡೆಲ್ ಹುಡುಕುತ್ತಿದ್ದೆ ಮತ್ತು ನಂತರ ನನಗೆ ಈ ನಿಜವಾದ ವಧು ಸಿಕ್ಕಿದರು. ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸಿದೆ, ಅವಳ ಪ್ರಮುಖ ದಿನಕ್ಕೆ ಆಕೆಯನ್ನು ಗೊಂಬೆ ರೀತಿ ಮಾಡಲು ನನಗೆ ಅವಕಾಶ ಸಿಕ್ಕಿತು ಎಂದು ವಿವರಣೆ ನೀಡಿದ್ದಾರೆ.
ಈ ವಿಡಿಯೊ 67 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು, ಸಾವಿರಾರು ಲೈಕ್ ಗಳಿಸಿದೆ. ನೆಟ್ಟಿಗರು ಕಲಾವಿದರ ಕೈಚಳಕವನ್ನು ಪ್ರಶಂಸಿಸಿದ್ದಾರೆ. “ನಿಮ್ಮ ಕೆಲಸಕ್ಕೆ ಪದಗಳಿಲ್ಲ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಧುವಿನ ಮೇಕ್ ಓವರ್ನ ಹಲವಾರು ಕ್ಲಿಪ್ ಇದ್ದು, “ಆಕೆ ಬಯಸಿದ್ದನ್ನು ಪಡೆದಿದ್ದರಿಂದ ಸಂತೋಷವಾಗಿದೆ” ಎಂಬ ಶೀರ್ಷಿಕೆ ಇದೆ. ಅಂತಿಮವಾಗಿ ಆ ವಧುವಿನ ಮುಖದಲ್ಲಿ ಖುಷಿ ಕಾಣಿಸಿದೆ. ಆ ವಿಡಿಯೋ ಕೂಡ ವೈರಲ್ ಆಗಿದೆ.