alex Certify ರೇಸ್​ ಟ್ರಾಕ್​ಗೆ ಸೂಟ್​ ಆಗುವಂತಿದೆ ಮಾರ್ಪಡಿಸಿದ ಮಾರುತಿ ಸುಜುಕಿ ಸ್ವಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇಸ್​ ಟ್ರಾಕ್​ಗೆ ಸೂಟ್​ ಆಗುವಂತಿದೆ ಮಾರ್ಪಡಿಸಿದ ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್​ ಭಾರತೀಯ ಪ್ರೀತಿಪಾತ್ರ ಕಾರು ಎಂಬುದು ಸಾಬೀತಾಗಿದೆ. ಕೈಗೆಟಕುವ ಬೆಲೆ, ಉತ್ತಮ ಮೈಲೇಜ್​, ನಿರ್ವಹಣೆ, ಕಾರ್ಯಕ್ಷಮತೆ ದೃಷ್ಟಿಯಿಂದ ಇದು ಹೆಸರುವಾಸಿ.

ಹಾಗೆಯೇ ಮಾರುತಿ ಸುಜುಕಿ ಸ್ವಿಫ್ಟ್​ ಎಸ್​ ಸಿ.ಎನ್.​ಜಿ. ರೂಪಾಂತರವು ಬಹಳ ಹಿಂದೆಯೇ ಬಿಡುಗಡೆಯಾಗಿದೆ. ಬಿಂಬಲ್​ ಡಿಸೈನ್​ ಹೈಪರ್​ ಬಾಡಿಕಿಟ್​ನೊಂದಿಗೆ ಮಾರುತಿ ಸುಜುಕಿ ಸ್ವಿಫ್ಟ್ ಡಿಜಿಟಲ್​ ಇಮೇಜ್​ ವಿನ್ಯಾಸಗೊಳಿಸಿದೆ, ಇದು ಹೆಚ್ಚು ಆಕ್ರಮಣಕಾರಿಯಾಗಿ ತೋರುತ್ತದೆ.

ವಿನ್ಯಾಸದ ವಿಶಿಷ್ಟತೆಗಳಿಗೆ ಸಂಬಂಧಿಸಿದಂತೆ, ಎದ್ದು ಕಾಣುವ ಮೊದಲ ವಿಷಯವೆಂದರೆ ದೊಡ್ಡದಾದ ಕಲರ್​ ಬಾಡಿ. ಹ್ಯಾಚ್​ಬ್ಯಾಕ್​ನ ಮುಂಭಾಗದ ಬಂಪರ್​ ಸಹ ನೆಲಕ್ಕೆ ಕಡಿಮೆ ಅಂತರದಲ್ಲಿದೆ. ಬಂಪರ್​ ಮೇಲೆ ಫಾಗ್​ ಲ್ಯಾಂಪ್​ ಸ್ಥಳದಲ್ಲಿ ಏರ್​ ಇಂಟೇಕ್​ ಸ್ಥಾಪಿಸಲಾಗಿದೆ. ಇದರ ಜೊತೆಗೆ, ಸೈಡ್​ ಇಂಡಿಕೇಟರ್​ ಸುತ್ತಲೂ ಕಪ್ಪು ಲೇಯರ್​ ಆಕರ್ಷಕವಾಗಿ ಕಾಣಿಸುತ್ತಿದೆ. ವಾಹನದ ರೇಸಿಂಗ್​ ವ್ಯೂಗೆ ಪ್ರಮುಖವಾಗಿ ಹಿಂಭಾಗದ ಸ್ಪಾಯ್ಲರ್​ ಅನ್ನು ಸೇರಿಸಲಾಗಿದೆ.

ಭಾರತದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕೇವಲ 5.92 ಲಕ್ಷ ರೂಪಾಯಿಗೆ (ಎಕ್ಸ್​ ಶೋರೂಂ) ಮತ್ತು 8.71 ಲಕ್ಷ ರೂಪಾಯಿಗೆ (ಎಕ್​ ಶೋರೂಂ) ಖರೀದಿಸಬಹುದು. ಹ್ಯಾಚ್​ಬ್ಯಾಕ್​ 1.2-ಲೀಟರ್​ ಓ -ಸರಣಿಯ 4- ಸಿಲಿಂಡರ್​ ಎಂಜಿನ್​ನಿಂದ 66 ಕೆಡಬ್ಲು ಪವರ್​ ಮತ್ತು 113 ಎನ್​ಎಂ ಟಾರ್ಕ್​ ಅನ್ನು ಉತ್ಪಾದಿಸುತ್ತದೆ, ಇದು ಮುಂಭಾಗದ ಚಕ್ರವನ್ನು ಮ್ಯಾನುವಲ್​ ಅಥವಾ ಸ್ವಯಂಚಾಲಿತ ಟ್ರಾನ್ಸ್​ಮಿಷನ್​ ಮೂಲಕ ಶಕ್ತಿ ನೀಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...