alex Certify ಮೊಬೈಲ್​ ಆಕಾರ, ವೈಶಿಷ್ಟ್ಯ, ಗಾತ್ರವನ್ನು 1963 ರಲ್ಲಿಯೇ ಊಹಿಸಿತ್ತು ಈ ಲೇಖನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್​ ಆಕಾರ, ವೈಶಿಷ್ಟ್ಯ, ಗಾತ್ರವನ್ನು 1963 ರಲ್ಲಿಯೇ ಊಹಿಸಿತ್ತು ಈ ಲೇಖನ…!

ಕಳೆದ 4-5 ದಶಕದ ಹಿಂದೆ ಸಾಮಾನ್ಯ ಜನರು ಮೊಬೈಲ್​ ಕ್ರಾಂತಿ ಇಷ್ಟೊಂದು ಮಟ್ಟಿಗೆ ನಡೆಯುತ್ತದೆ ಎಂದು ಊಹಿಸಿರಲಿಕ್ಕಿಲ್ಲ. ಆದರೆ, 1963ರಲ್ಲೆ ಪ್ರಕಟವಾದ ಲೇಖನವೊಂದು ಈಗಿನ ಬೆಳವಣಿಗೆ ಹೇಗೆಲ್ಲ ನಡೆಯಬಹುದೆಂದು ಲೇಖನ ಪ್ರಕಟಿಸಿತ್ತು.

ಲೇಖನವು ಏಪ್ರಿಲ್​ 18, 1963ರಂದು ಇಂಗ್ಲೆಂಡ್​ನ ಮ್ಯಾನ್ಸ್​ಫೀಲ್ಡ್​ನ ಓಹಿಯೋ ನ್ಯೂ ಜರ್ನಲ್ ನಲ್ಲಿ ಪ್ರಕಟವಾದ ಲೇಖನದಲ್ಲಿ ಭವಿಷ್ಯದಲ್ಲಿ ಪ್ರಪಂಚದಾದ್ಯಂತ ಜನರು ಮೊಬೈಲ್​ ಫೋನ್​ಗಳನ್ನು ತಮ್ಮ ಜೇಬಿನಲ್ಲಿ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಉಲ್ಲೇಖಿಸಲಾಗಿತ್ತು.

‘ನೀವು ಭವಿಷ್ಯದಲ್ಲಿ ಫೋನ್​ ಅನ್ನು ಜೇಬಿನಲ್ಲಿ ಸಾಗಿಸಲು ಸಾಧ್ಯವಾಗುತ್ತದೆ’ ಎಂಬ ಶೀರ್ಷಿಕೆಯೊಂದಿಗೆ, ಪ್ರಕಟವಾದ ಲೇಖನವು ಆಧುನಿಕ ಕಾಲದ ಫ್ಲಿಪ್​-ಫೋನ್​ನಂತೆ ನಿಖರವಾಗಿ ಕಾಣುವ ಮೊಬೈಲ್​ ಅನ್ನು ಮಹಿಳೆಯೊಬ್ಬರು ಕೊಂಡೊಯ್ಯುವ ಪ್ರಾತಿನಿಧಿಕ ಚಿತ್ರವನ್ನು ಸಹ ಪ್ರಕಟಿಸಿತ್ತು. ಹಾಗೆಯೇ, ಮೊಬೈಲ್​ ಸಾಧನವು ಪ್ರಯೋಗಾಲಯದಲ್ಲಿ ಅಭಿವೃದ್ಧಿಯಲ್ಲಿರುವುದರಿಂದ ಶೀಘ್ರದಲ್ಲೇ ಬಿಡುಗಡೆ ನಿರೀಕ್ಷಿಸಬೇಡಿ ಎಂದು ಲೇಖನವು ಓದುಗರಲ್ಲಿ ಕೋರಿತ್ತು.

ಟೆಲಿಫೋನ್​ ಕಂಪನಿಯ ಕರ್ಮಷಿಯಲ್​ ಮ್ಯಾನೇಜರ್​ ಫ್ರೆಡ್ರಿಕ್​ ಹನ್ಸ್ಟ್ಮನ್ ಅವರು ಅಂದು ಪ್ರತಿಕ್ರಿಯೆ ನೀಡಿ, “ಈ ದೂರವಾಣಿಯು ಕಮರ್ಷಿಯಲ್​ ಬಳಕೆಗೆ ಬಹಳ ಸಮಯ ಬೇಕಾಗುತ್ತದೆ. ಅದು ನಾಳೆ ಲಭ್ಯವಾಗುತ್ತದೆ ಎಂದು ನಿರೀಕ್ಷಿಸಬೇಡಿ. ಇದೀಗ, ಪ್ರಯೋಗಾಲಯದಲ್ಲಷ್ಟೇ ಕಾರ್ಯಸಾಧ್ಯವಾಗಿದೆ, ಎಲ್ಲೇ ಇದ್ದರೂ ಕರೆಗಳನ್ನು ಮಾಡಲು ಮತ್ತು ಉತ್ತರಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದರು.

ಅದರ ಅಂದಿನ ಸ್ಥಿತಿಗಳು, ಯಾವ ರೀತಿ ಕೆಲಸ ಮಾಡುತ್ತದೆ, ತಂತ್ರಜ್ಞಾನ ಬಳಕೆ, ಕಾರ್ಯ ವಿಧಾನ ಸೇರಿ ಅನೇಕ ಅಂಶಗಳು ಅದರಲ್ಲಿ ಉಲ್ಲೇಖವಾಗಿದೆ ಎಂಬುದು ಗಮನಾರ್ಹ ಸಂಗತಿ.

https://twitter.com/Histreepix/status/1557997126470230017?ref_src=twsrc%5Etfw%7Ctwcamp%5Etweetembed%7Ctwterm%5E1557997126470230017%7Ctwgr%5E0437738d7ddddbb026dc70c622a228d1df2165c2%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fthis-1963-newspaper-article-predicted-shape-size-and-features-of-modern-cell-phone-5739193.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...