ಬ್ರಾಡ್‌ಬ್ಯಾಂಡ್‌ನ ನಿಧಾನಗತಿಯ ವೇಗ ಮತ್ತು ಭಾರಿ ಫೈಬರ್ ನೆಟ್‌ವರ್ಕ್ ಶುಲ್ಕಗಳಿಂದ ಬೇಸತ್ತ ಅಮೆರಿಕಾದ ವ್ಯಕ್ತಿಯೊಬ್ಬ ತನ್ನದೇ ಆದ ಬ್ರಾಡ್‌ಬ್ಯಾಂಡ್ ನಿರ್ಮಿಸಿ ಸುದ್ದಿಯಾಗಿದ್ದಾನೆ.
ಹೌದು, ವಾಶ್ಟೆನಾವ್ ಕೌಂಟಿಯ ನಿವಾಸಿ ಜೇರೆಡ್ ಮೌಚ್ ಅವರು ಸರ್ಕಾರದಿಂದ 20.7 ಕೋಟಿ ರೂ. ಪಡೆದುಕೊಂಡಿದ್ದಾರೆ. ಜೇರೆಡ್ ಮೌಚ್ ಅವರು ತಮ್ಮ ನೆಟ್‌ವರ್ಕ್ ಪೂರೈಕೆದಾರರು ಒದಗಿಸಿದ ನಿಧಾನಗತಿಯ 1.5 ಎಂಬಿಪಿಎಸ್ ಇಂಟರ್ನೆಟ್ ವೇಗದಿಂದ ಬೇಸರಗೊಂಡಿದ್ದರು.
ಹೀಗಾಗಿ ಅವರು ಮತ್ತೊಂದು ಕಂಪನಿಯಿಂದ ಫೈಬರ್ ನೆಟ್ ಸಂಪರ್ಕವನ್ನು ಕೋರಿದ್ರು. ಆದರೆ, ಅವರು ಡಾಲರ್ 50,000 ( ಸುಮಾರು 40 ಲಕ್ಷ ರೂ.) ಮೊತ್ತಕ್ಕೆ ಗ್ರಾಮೀಣ ಮನೆಗೆ ಸಂಪರ್ಕವನ್ನು ವಿಸ್ತರಿಸಲು ಮುಂದಾದರು.
ನೆಟ್‌ವರ್ಕ್ ಇಂಜಿನಿಯರ್ ಆಗಿದ್ದ ಜೇರೆಡ್ ಬಿಕ್ಕಟ್ಟಿಗೆ ತಲೆಕೆಡಿಸಿಕೊಳ್ಳುವ ಬದಲು ತನ್ನದೇ ಆದ ಇಂಟರ್ನೆಟ್ ಸೇವಾ ಪೂರೈಕೆದಾರರನ್ನು (ಐಎಸ್ಪಿ) ಸ್ಥಾಪಿಸಲು ನಿರ್ಧರಿಸಿದ್ರು. ಜೇರೆಡ್ ತನ್ನ ಸ್ವಂತ ಬ್ರಾಡ್‌ಬ್ಯಾಂಡ್ ಅನ್ನು ವಾಶ್ಟೆನಾವ್ ಫೈಬರ್ ಪ್ರಾಪರ್ಟೀಸ್ ಎಲ್ಎಲ್ ಸಿ ಹೆಸರಿನಲ್ಲಿ ಸ್ಥಾಪಿಸಿದರು. ತನ್ನ ಪ್ರದೇಶದಲ್ಲಿ ಸುಮಾರು 70 ಗ್ರಾಹಕರಿಂದ ಪ್ರಾರಂಭಿಸಿ, ಜೇರೆಡ್ 2021 ರಲ್ಲಿ ಸುಮಾರು 600 ಗ್ರಾಹಕರಿಗೆ ವಿಸ್ತರಿಸಿದರು.