ಇತ್ತೀಚೆಗಷ್ಟೆ ದೇಶದಲ್ಲೆಲ್ಲ ರಕ್ಷಾಬಂಧನ ಹಬ್ಬವನ್ನ ಭರ್ಜರಿಯಾಗಿ ಆಚರಿಸಲಾಯಿತು. ಈ ದಿನ ಸಹೋದರಿ – ಸಹೋದರನ ಕೈಗೆ ರಕ್ಷಾಸೂತ್ರವನ್ನು ಕಟ್ಟುವುದು ಸಹೋದರನಿಗೆ ದೀರ್ಘಾಯುಷ್ಯ ಮತ್ತು ಆರೋಗ್ಯವಂತ ಜೀವನವನ್ನು ಹಾರೈಸಲಾಗುತ್ತದೆ. ಅಣ್ಣ-ತಂಗಿಯ ಈ ಹಬ್ಬವನ್ನ ಒಂದೊಂದು ಪ್ರಾಂತ್ಯದವರು ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ಆದರೆ ರಾಜಸ್ಥಾನದ ಮಹಿಳೆಯೊಬ್ಬರು ಈ ರಕ್ಷಾ ಬಂಧನ ಹಬ್ಬ ಆಚರಿಸಿದ್ದೇ ವಿಭಿನ್ನ ಬಗೆಯಲ್ಲಿ.
ರಾಜಸ್ತಾನದ ರಾಜ್‌ಮಸಂದ್ ಎಂಬ ಗ್ರಾಮದ ಮಹಿಳೆ ಚಿರತೆಯೊಂದಕ್ಕೆ ರಾಖಿ ಕಟ್ಟಿ ಎಲ್ಲರೂ ಶಾಕ್ ಆಗುವಂತೆ ಮಾಡಿದ್ದಾರೆ. ಅಸಲಿಗೆ ಆಕೆ ತನ್ನ ಕುಟುಂಬದೊಂದಿಗೆ ತನ್ನ ಸಹೋದರನಿಗೆ ರಾಖಿ ಕಟ್ಟಲು ಹೊರಟಿದ್ದಾಗ ನಡೆದ ಘಟನೆ ಇದು.
ಸಹೋದರನಿಗೆ ರಾಖಿ ಕಟ್ಟಲು ಹೊರಟ ಮಹಿಳೆಗೆ ಮಾರ್ಗಮಧ್ಯೆ ದಿಯೋಗರ್ ಉಪವಿಭಾಗದ ನರನಾ ಪಾಣಿ ರಸ್ತೆಯಲ್ಲಿ ಚಿರತೆ ಗಾಯಗೊಂಡಿದ್ದು ಕಾಣಿಸಿದೆ. ಪಾಣಾಡಿ ಗ್ರಾಮದ ಮಹಿಳೆ ಶಕ್ತಿ ಕಾಂಚನ್ ಕನ್ವರ್ ಅವರು ರಕ್ಷಾಸೂತ್ರ ಕಟ್ಟಿ ಶೀಘ್ರ ಗುಣಮುಖವಾಗಲಿ ಎಂದು ಹಾರೈಸಿ ತನ್ನ ಕುಟುಂಬ ಸದಸ್ಯರ ಸಹಾಯದಿಂದ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಕೆಲವೇ ಕೆಲವು ಪ್ರಾಣಿಗಳು ಮಾತ್ರ ಮನುಷ್ಯರೊಂದಿಗೆ ಸುಲಭವಾಗಿ ಹೊಂದಿಕೊಂಡು ಬಿಡುತ್ತೆ. ಆಟ ಆಡೋದು, ಮುದ್ದಾಡೋದು ಹೀಗೆ ಒಂದಾ ಎರಡಾ, ಮನುಷ್ಯ ಎಷ್ಟೋ ಬಾರಿ ಒತ್ತಡದಿಂದ ಬಳಲುತ್ತಿದ್ಧಾಗ ಪ್ರಾಣಿಗಳೊಂದಿಗೆ ಸಮಯ ಕಳೆಯಲು ಇಷ್ಟಪಡ್ತಾನೆ. ಆದರೆ ಇದೆ ಮೊದಲ ಬಾರಿ ಕಾಡು ಪ್ರಾಣಿ, ಅದರಲ್ಲೂ ಚಿರತೆಯೊಂದನ್ನ ತನ್ನ ಸಹೋದರ ಅಂತ ಅಂದುಕೊಂಡು ಹೀಗೆ ರಾಖಿ ಕಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೃದಯಸ್ಪರ್ಶಿ ಚಿತ್ರವನ್ನು ಸರ್ಕಾರಿ ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಭಾರತದಲ್ಲಿ ಮನುಷ್ಯರು ಮತ್ತು ಪ್ರಾಣಿಗಳು ನಡುವಿನ ಬಾಂಧವ್ಯ ಯಾವ ರೀತಿಯದ್ದು ಅಂತ ಎತ್ತಿ ತೋರಿಸೋ ಹಾಗಿದೆ ಈ ಘಟನೆ.
ಹಲವು ಯುಗಗಳಿಂದ ಮನುಷ್ಯ, ಕಾಡು ಮತ್ತು ಕಾಡು ಪ್ರಾಣಿಗಳ ಕುರಿತಾಗಿ ಪ್ರೀತಿ ಹಾಗೂ ಸಾಮರಸ್ಯದಿಂದ ಬದುಕುತ್ತಿದ್ದಾನೆ. ರಾಜಸ್ಥಾನದಲ್ಲಿ, ಮಹಿಳೆ, ಗಾಯಗೊಂಡ ಚಿರತೆಯನ್ನ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮೊದಲು, ಆ ಚಿರತೆಗೆ ರಾಖಿ ಕಟ್ಟುವ ಮೂಲಕ ನಮ್ಮ ಕಾಡಿಗೆ ಈ ಅನಿಯಂತ್ರಿತ ಪ್ರೀತಿಯನ್ನು ತೋರಿಸಿದ್ದಾರೆ’’ ಎಂದು ಟ್ವಿಟ್ ಮಾಡಿರುವ ಸುಶಾಂತ್ ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದರಿಂದ, ಅನೇಕ ನೆಟ್ಟಿಗರು ಪೋಸ್ಟ್ ಬಗ್ಗೆ ತಮ್ಮ ಪ್ರೀತಿ ಮತ್ತು ಬೆಂಬಲವನ್ನು ನೀಡಿದ್ದು, ಮಹಿಳೆಯ ಮಾಡಿರುವ ಈ ಕೆಲಸವನ್ನ ಶ್ಲಾಘಿಸಿದ್ದಾರೆ.
ಇನ್ನು, ಸುಶಾಂತ್ ನಂದಾ ಫೋಟೋಗೆ ಹಲವು ನೆಟ್ಟಿಗರು ಕಮೆಂಟ್ ಹಾಗೂ ಲೈಕ್‌ಗಳ ಸುರಿಮಳೆ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಹಲವು ಜನರು ವಿಭಿನ್ನ ಕಮೆಂಟ್‌ಗಳನ್ನು ಸಹ ಮಾಡಿದ್ದಾರೆ. “ಹಾಗೆಯೇ ಇರಬೇಕು. ನಾವು ಕಾಡುಗಳು ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕು. ದೇವರು ಎಲ್ಲಾ ರೀತಿಯ ಜೀವನವನ್ನು ಸೃಷ್ಟಿಸಿದ್ದಾನೆ ಮತ್ತು ಪ್ರಪಂಚವು ಮನುಷ್ಯರಿಗೆ ಮಾತ್ರವಲ್ಲ” ಎಂದು ಒಬ್ಬ ಬಳಕೆದಾರರು ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೊಬ್ಬರು, “ರಾಖಿ ಕಟ್ಟುವುದು ಸಾಂಕೇತಿಕವಾಗಿದೆ….. ಪ್ರೀತಿ ಮತ್ತು ವಾತ್ಸಲ್ಯವು ತುಂಬಾ ಸುಂದರವಾಗಿದೆ….. ಮಹಿಳೆ ತೋರಿಸಿದಂತೆ….. ಮತ್ತು ನಮ್ಮ ಕಾಡುಗಳನ್ನು ನೋಡಿಕೊಳ್ಳುವ ಎಲ್ಲಾ ಸಿಬ್ಬಂದಿಗೆ ದೊಡ್ಡ ಚಪ್ಪಾಳೆ.” ಎಂದು ಟ್ವೀಟ್ ಮಾಡಿದ್ದಾರೆ.
https://youtu.be/IIMB0KzDFI4