ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಷ್ಟ್ರಧ್ವಜಕ್ಕಿಂತ ಭಗವಾ ಧ್ವಜಕ್ಕೆ ಮಾನ್ಯತೆಯನ್ನು ನೀಡುತ್ತದೆ. ಹೀಗಾಗಿ ಸ್ವಾತಂತ್ರ್ಯ ಬಂದ ನಂತರವೂ ಬಹು ವರ್ಷಗಳ ಕಾಲ ಆರ್.ಎಸ್.ಎಸ್. ನಾಗಪುರದ ತನ್ನ ಕೇಂದ್ರ ಕಛೇರಿ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿರಲಿಲ್ಲವೆಂಬ ಟೀಕೆ ಪ್ರತಿಪಕ್ಷಗಳಿಂದ ಪದೇ ಪದೇ ಕೇಳಿ ಬರುತ್ತಿತ್ತು.
ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ʼಹರ್ ಘರ್ ತಿರಂಗಾʼ ಅಭಿಯಾನಕ್ಕೆ ಕರೆ ಕೊಟ್ಟು ತಮ್ಮ ಸಾಮಾಜಿಕ ಜಾಲತಾಣದ ಡಿಪಿಯಲ್ಲಿ ರಾಷ್ಟ್ರ ಧ್ವಜವನ್ನು ಹಾಕಿಕೊಂಡಿದ್ದರೂ ಆರ್.ಎಸ್.ಎಸ್. ತನ್ನ ಡಿಪಿ ಬದಲಾಯಿಸದಿರುವ ಕುರಿತು ವ್ಯಂಗ್ಯದ ಮಾತುಗಳು ಕೇಳಿ ಬಂದಿದ್ದವು.
ಇದೀಗ ಆರ್.ಎಸ್.ಎಸ್. ಸಾಮಾಜಿಕ ಜಾಲತಾಣದ ಖಾತೆಗಳಾದ ಫೇಸ್ ಬುಕ್ , ಟ್ವಿಟ್ಟರ್ ಗಳಲ್ಲಿ ರಾಷ್ಟ್ರ ಧ್ವಜದ ಡಿಪಿ ಹಾಕುವುದರ ಮೂಲಕ ಟೀಕಾಕಾರಿಗೆ ತಿರುಗೇಟು ನೀಡಿದೆ.