ಮದುವೆ ಮನೆಯಲ್ಲೂ ಬಂತು ಕ್ಯೂಆರ್ ಕೋಡ್….! 13-08-2022 10:35AM IST / No Comments / Posted In: Latest News, India, Live News ಇತ್ತೀಚೆಗೆ ಡಿಜಿಟಲ್ ಪಾವತಿ ಹೆಚ್ಚುತ್ತಿವೆ. ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕವು ಪ್ರಪಂಚದಾದ್ಯಂತ ವಿನಾಶವನ್ನು ಉಂಟುಮಾಡಿದ ನಂತರ, ಜನರು ಹೆಚ್ಚಾಗಿ ತಮ್ಮ ಫೋನ್‌ಗಳ ಮೂಲಕವೇ ಪಾವತಿಸಲು ಬಯಸುತ್ತಾರೆ. ಇದೀಗ ಮದುವೆ ಮನೆಯಲ್ಲೂ ಕ್ಯೂಆರ್ ಕೂಡ್ ಉಪಯೋಗಿಸಿದ ವಿಡಿಯೋ ವೈರಲ್ ಆಗಿದೆ. ಹೌದು, ಇದೀಗ ವೈರಲ್ ಆಗಿರುವ ವಿಡಿಯೋವನ್ನು ಸುಮನ್ ರಸ್ತೋಗಿ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪೇಟಿಎಂ ಮೂಲಕ ಧೋಲ್ ನುಡಿಸುವ ವ್ಯಕ್ತಿಗೆ ಹಣ ಕಳುಹಿಸುವುದನ್ನು ಕಾಣಬಹುದು. ಆ ವ್ಯಕ್ತಿಯು ಶಾಸ್ತ್ರೋಕ್ತವಾಗಿ ವರನ ತಲೆಯ ಸುತ್ತ ತನ್ನ ಫೋನ್ ಅನ್ನು ಸುತ್ತಿದ್ದಾನೆ. ನಂತರ ಬಾರಾತ್‌ನಲ್ಲಿ ಧೋಲ್ ವಾಲಾ ಅಂಟಿಸಿದ್ದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಹಣ ಕಳುಹಿಸಲು ಮುಂದಾಗಿದ್ದಾನೆ. ಬಿಹಾರದಲ್ಲಿ ಮದುವೆಯೊಂದರಲ್ಲಿ ಈ ದೃಶ್ಯ ಕಂಡು ಬಂದಿದೆ ಎಂದು ತಿಳಿದುಬಂದಿದೆ. ತಂತ್ರಜ್ಞಾನವನ್ನು ಹೇಗೆ ಬಳಸುವುದು ಎಂಬುದು ಭಾರತೀಯರಿಗೆ ಮಾತ್ರ ಚೆನ್ನಾಗಿ ತಿಳಿದಿದೆ ಎಂದು ಶೀರ್ಷಿಕೆ ನೀಡಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. #Paytm karo #Bihar Shaadi me bhi 🤣🤣🤣 How to use the technology, only Indians knew very well 😅😅 #KhudKiSunLe #BiharPolitics pic.twitter.com/Uc5J0UjFeB — Suman Rastogi (@SumanRastogi6) August 10, 2022