92 ಪ್ರಯಾಣಿಕರೊಂದಿಗೆ ಬೆಂಗಳೂರಿನಿಂದ ಮಾಲ್ಡೀವ್ಸ್‌ನ ಹಾರುತ್ತಿದ್ದ ಗೋ ಫಸ್ಟ್ ವಿಮಾನವು ತಮಿಳುನಾಡಿನ ಕೊಯಮತ್ತೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹೊಗೆ ಕಾಣಿಸಿಕೊಂಡಿದ್ದರಿಂದ ವಿಮಾನವು ತುರ್ತು ಭೂಸ್ಪರ್ಶ ಮಾಡಿದೆ.
ಎಂಜಿನ್‌ಗಳು ಅತಿಯಾಗಿ ಬಿಸಿಯಾಗಿದ್ದು, ನಂತರ ಅಲಾರಾಂ ಆಫ್ ಆಗಿದೆ. ಬೆಂಗಳೂರಿನಿಂದ ವಿಮಾನ ಟೇಕ್ ಆಫ್ ಆದ ಒಂದು ಗಂಟೆಯ ನಂತರ, ಅಲಾರಾಂ ಆಫ್ ಆಯಿತು. ಹೀಗಾಗಿ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು.
12.57ಕ್ಕೆ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ವಿಮಾನ ಇಳಿದಿದೆ. ಕೂಡಲೇ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಸನ್ನದ್ಧವಾಗಿ ನಿಂತಿದ್ದರು. ಆದರೆ, ವಿಮಾನದಲ್ಲಿ ದಹನದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.
ಕಳೆದ ವಾರ, ಗೋ ಫಸ್ಟ್‌ನ ವಿಮಾನವು ಗುರುವಾರ ಮಧ್ಯಾಹ್ನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಹಕ್ಕಿಗಳು ಬಡಿದಿದ್ದರಿಂದ ಅಹಮದಾಬಾದ್‌ನಲ್ಲಿ ಮತ್ತೆ ಲ್ಯಾಂಡಿಂಗ್ ಮಾಡಬೇಕಾಯಿತು.