ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಅಶ್ವತ್ಥನಾರಾಯಣ ನಡುವಿನ ವಾಕ್ಸಮರ ತಾರಕಕ್ಕೇರಿರುವ ಬೆನ್ನಲ್ಲೇ ಇದೀಗ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
30 ವರ್ಷಗಳ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ನನಗೆ ಬೆದರಿಕೆ ಹಾಕಿ ಹಣ ಪಡೆದಿದ್ದರು. ಈಗ ನನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕುಮಾರಸ್ವಾಮಿ ಏನು ಮಾಡ್ತಿದ್ದಾರೆ ಎಂದು ಗೊತ್ತಿದೆ. ರಾಜಕೀಯವಾಗಿ ಎಲ್ಲರನ್ನೂ ಟೀಕೆ ಮಾಡುತ್ತಾರೆ. ಯಾರನ್ನೂ ಬೆಳೆಯಲು ಬಿಡುವುದಿಲ್ಲ. ನನ್ನ ಹಾಗೂ ಅಶ್ವತ್ಥ ನಾರಾಯಣ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ನಾನು ಶಾಕನಾಗಿದ್ದಾಗ ಹೆಚ್.ಡಿ.ಕೆ ಬಾಡಿಗೆ ಮನೆಯಲ್ಲಿದ್ದರು. ಆಗ ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ನನ್ನ ಜಾಗವನ್ನು ನೈಸ್ ಕಂಪನಿಗೆ ಅಕ್ವೈರ್ ಮಾಡಿಸಿದ್ರು ಎಂದು ಹೇಳಿದ್ದಾರೆ.
ಈಗ ನನ್ನನ್ನು ಯೋಗೇಶ್ವರ್ ಏನು ತೆಂಗಿನ ಕಾಯಿ ವ್ಯಾಪಾರಿನಾ? ನೀರಾವರಿ ತಜ್ಞನಾ? ಎಂದು ಹಗುರವಾಗಿ ಮಾತನಾಡುತ್ತಿದ್ದಾರೆ. ಹೆಚ್ ಡಿಕೆ ಏ.ನು ನೀರಾವರಿ ತಜ್ಞರಾ? ಎಂದು ನಾನು ಕೇಳಬಹುದು. ಇಂತಹ ಅನಗತ್ಯ ಮಾತುಗಳನ್ನು ಆಡಬೇಡಿ ಎಂದು ಕುಮಾರಸ್ವಾಮಿಯವರೇ ಎಚ್ಚರಿಕೆ ಕೊಡುತ್ತಿದ್ದೇನೆ ಎಂದು ವಾರ್ನಿಂಗ್ ನೀಡಿದ್ದಾರೆ.