ಈ ಹೃದಯಸ್ಪರ್ಶಿ ಕಥೆ ಕೇಳಿದ್ರೆ, ಖಂಡಿತಾ ನಿಮ್ಮ ಹೃದಯ ಕರಗದೆ ಇರಲಾರದು. ನ್ಯೂಜೆರ್ಸಿಯ ಮಹಿಳೆಯೊಬ್ಬರು ತಮ್ಮ ಮಗಳನ್ನು ಅಭಿನಂದಿಸಲು ಸಂಪೂರ್ಣ ಬಿಲ್ಬೋರ್ಡ್ ಪ್ರದೇಶವನ್ನು ಬಾಡಿಗೆಗೆ ಪಡೆದಿದ್ದಾರೆ. ಆಕೆ ಡಾಕ್ಟರೇಟ್ ಪದವಿ ಗಳಿಸಿದ್ದಳು. ಹೀಗಾಗಿ ತನ್ನ ಮಗಳ ಸಾಧನೆಯನ್ನು ಆಚರಿಸಲು, ತಾಯಿ ಫ್ಲೆಕ್ಸ್ ಅಳವಡಿಸೋ ಮೂಲಕ ಸಂಭ್ರಮಿಸಿದ್ದಾರೆ.
ಹೌದು, ಬಸ್ಬೀ ಎಂಬ ಮಹಿಳೆ ತನ್ನ ಮಗಳ ಬಗ್ಗೆ ತುಂಬಾ ಹೆಮ್ಮೆಪಡುತ್ತಾಳೆ. ಅವಳು ತನ್ನ ಸಾಧನೆಯನ್ನು ಇಡೀ ನಗರಕ್ಕೆ ತಿಳಿಸಲು ಬಯಸಿದ್ದಳು. ಇದಕ್ಕಾಗಿ 52 ವರ್ಷ ವಯಸ್ಸಿನ ಬಸ್ಬೀ ಬಿಲ್ಬೋರ್ಡ್ ಜಾಗವನ್ನು ಬಾಡಿಗೆಗೆ ಪಡೆದ್ರು. ಹಾಗೂ ಹೋರ್ಡಿಂಗ್ನಲ್ಲಿ ತನ್ನ ಮಗಳ ಮುಖವನ್ನು ಮುದ್ರಿಸಿದ್ದಾರೆ. ಇದಕ್ಕಾಗಿ ಅವರು 1250 ಅಮೆರಿಕನ್ ಡಾಲರ್ ಪಾವತಿಸಿದ್ದಾರೆ. ಅಂದರೆ ಸುಮಾರು 99,306 ರೂ.
ಹೌದು, ಕ್ಯಾಮ್ಡೆನ್ ಬಳಿ ಏರ್‌ಪೋರ್ಟ್ ಸರ್ಕಲ್‌ನ ದಕ್ಷಿಣಕ್ಕೆ ಜಾಹೀರಾತು ಫಲಕವನ್ನು ಇರಿಸಲಾಗಿದೆ. ತನ್ನ ಮಗಳ ಹೆಸರಿನ ಮುಂದೆ ಡಾಕ್ಟರ್ ಎಂಬ ಪದವಿಯನ್ನು ಬರೆಯುವ ಮೂಲಕ ಅವರು ಸಂಭ್ರಮಿಸಿದ್ದಾರೆ. ಅಂದಹಾಗೆ, ಕ್ರಿಸ್ಟಿನ್ ಮನೋವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಜುಲೈ 29 ರಂದು ಫಿಲಡೆಲ್ಫಿಯಾ ಕಾಲೇಜ್ ಆಫ್ ಆಸ್ಟಿಯೋಪತಿಕ್ ಮೆಡಿಸಿನ್‌ನಿಂದ ಈ ಉನ್ನತ ಪದವಿ ಪಡೆದಿದ್ದಾರೆ.
ಬಸ್ಬೀ ತನ್ನ ಮಗಳು ಕ್ರಿಸ್ಟೀನ್ ಎಸ್. ಸ್ಮಾಲ್ಸ್ ಡಾಕ್ಟರೇಟ್ ಪದವಿಯನ್ನು ಅಭಿನಂದಿಸಲು ಫೇಸ್‌ಬುಕ್‌ನಲ್ಲಿ ಪೋಸ್ಟ್ ಅನ್ನು ಕೂಡ ಹಂಚಿಕೊಂಡಿದ್ದಾರೆ.