ಬೆಳಗಿನ ಉಪಹಾರ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಹಾಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏನೇನು ತಿನ್ನಬಹುದು? ಯಾವೆಲ್ಲಾ ಆಹಾರವನ್ನು ತಿನ್ನಬಾರದು ಅನ್ನೋದು ನಮ್ಮ ಗಮನದಲ್ಲಿರಬೇಕು. ಆಮ್ಲೀಯವಾಗಿರುವ ಪದಾರ್ಥವನ್ನು ತಿಂದರೆ ಹೊಟ್ಟೆ ಮತ್ತು ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಸೋಂಕಿಗೆ ತುತ್ತಾಗುವ ಅಪಾಯವಿರುತ್ತದೆ.
ಮೊಟ್ಟೆ: ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದು ಬೆಳಗಿನ ಉಪಹಾರಕ್ಕೆ ಅತ್ಯಂತ ಸೂಕ್ತವಾಗಿದೆ. ಬೆಳಗ್ಗೆ ಮೊಟ್ಟೆ ತಿನ್ನುವುದರಿಂದ ನಿಮ್ಮ ಹೊಟ್ಟೆ ದಿನವಿಡೀ ತುಂಬಿಕೊಂಡಿರುವ ಅನುಭವವಾಗುತ್ತದೆ. ಮೊಟ್ಟೆ ನಿಮ್ಮ ದೇಹಕ್ಕೆ ಸಾಕಷ್ಟು ಶಕ್ತಿ ನೀಡುತ್ತದೆ.
ಪಪ್ಪಾಯ: ಪಪ್ಪಾಯ ಕೂಡ ಸೂಪರ್ ಫುಡ್. ಪ್ರತಿ ಋತುವಿನಲ್ಲೂ ದೊರೆಯುವ ಪಪ್ಪಾಯ ಹಣ್ಣನ್ನು ಉಪಹಾರದ ಜೊತೆ ಸೇವಿಸಿ. ಇದು ನಿಮ್ಮ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗವನ್ನು ತಡೆಯುತ್ತದೆ.
ನೆನೆಸಿದ ಬಾದಾಮಿ : ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ 4 ನೆನೆಸಿದ ಬಾದಾಮಿ ತಿನ್ನಬೇಕು. ಇದರಿಂದ ನಾವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೇವೆ. ಫೈಬರ್, ಒಮೆಗಾ -3 ಮತ್ತು ಒಮೆಗಾ -6 ಬಾದಾಮಿಯಲ್ಲಿದೆ. ಬಾದಾಮಿ ಸಿಪ್ಪೆಯನ್ನು ತೆಗೆದು ಸೇವನೆ ಮಾಡುವುದು ಉತ್ತಮ.
ಓಟ್ಸ್: ನೀವು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೌಷ್ಟಿಕಾಂಶದ ಆಹಾರವನ್ನು ತಿನ್ನಲು ಬಯಸಿದರೆ, ಓಟ್ ಮೀಲ್ ಉತ್ತಮ ಉಪಹಾರವಾಗಿದೆ. ಇದು ತೂಕವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ತಿನ್ನಬೇಡಿ…
ಟೊಮೆಟೊ: ಹಸಿ ಟೊಮೆಟೊಗಳನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಹಸಿ ಟೊಮೆಟೊಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಹಾನಿಕಾರಕ. ಟೊಮೆಟೊದಲ್ಲಿರುವ ಆಮ್ಲೀಯ ಗುಣಲಕ್ಷಣಗಳು ಹೊಟ್ಟೆಯಲ್ಲಿರುವ ಜಠರಗರುಳಿನ ಆಮ್ಲದೊಂದಿಗೆ ಪ್ರತಿಕ್ರಿಯಿಸಿ ಜೆಲ್ ಅನ್ನು ರೂಪಿಸುತ್ತದೆ. ಇದು ಹೊಟ್ಟೆ ನೋವು, ಸೆಳೆತದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಡಿ.
ಮೊಸರು: ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದರೂ, ಅದನ್ನು ಹಸಿದ ಹೊಟ್ಟೆಯಲ್ಲಿ ತಿನ್ನಬಾರದು. ಇದು ಲ್ಯಾಕ್ಟಿಕ್ ಆಸಿಡ್ ಅನ್ನು ಹೊಂದಿರುತ್ತದೆ, ಆದ್ದರಿಂದ ಬೆಳಿಗ್ಗೆ ಮೊಸರು ತಿನ್ನುವುದು ಹಾನಿಕಾರಕ.
ಸೋಡಾ: ಉತ್ತಮ ಗುಣಮಟ್ಟದ ಕಾರ್ಬೋನೇಟ್ ಆಮ್ಲವು ಸೋಡಾದಲ್ಲಿ ಕಂಡುಬರುತ್ತದೆ. ಈ ವಸ್ತುವು ಹೊಟ್ಟೆಯಲ್ಲಿರುವ ಆಮ್ಲದೊಂದಿಗೆ ಬೆರೆತಾಗ, ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಬೆಳಿಗ್ಗೆ ಸೋಡಾ ಸೇವನೆಯನ್ನು ತಪ್ಪಿಸಬೇಕು.