ಮದುವೆಯನ್ನು ಅತ್ಯಂತ ಪವಿತ್ರ ಬಂಧನವೆಂದು ಪರಿಗಣಿಸಲಾಗುತ್ತದೆ. ಆದ್ರೆ ಸೂಕ್ತ ಜೀವನ ಸಂಗಾತಿ ದೊರೆತಲ್ಲಿ ಮಾತ್ರ ಮದುವೆಗೊಂದು ಅರ್ಥ ಬರುತ್ತದೆ. ಹೆತ್ತವರು ತಮ್ಮ ಮಕ್ಕಳ ಮದುವೆ ಮಾಡಲು ಸಾಕಷ್ಟು ಶ್ರಮಿಸುತ್ತಾರೆ, ಸರಿಯಾದ ಸಂಗಾತಿಯನ್ನು ಹುಡುಕಲು ಕಸರತ್ತು ನಡೆಸ್ತಾರೆ.
ಇಷ್ಟೆಲ್ಲಾ ಅಳೆದು ತೂಗಿ ಮಾಡಿದರೂ ಕೆಲವೊಂದು ಮದುವೆ, ನಿಶ್ಚಿತಾರ್ಥಗಳು ಮುರಿದು ಬೀಳುತ್ತವೆ. ಇಂಥದ್ದೇ ಘಟನೆಯೊಂದು ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದಿದೆ.
ನಿಶ್ಚಿತಾರ್ಥ ಮುರಿದು ಬಿದ್ದಿದ್ದಕ್ಕೆ ಆಕ್ರೋಶಗೊಂಡ ವರನ ಕುಟುಂಬಸ್ಥರು ವಧುವಿನ ತಂದೆಯ ಮೂಗನ್ನೇ ಕತ್ತರಿಸಿ ಹಾಕಿದ್ದಾರೆ. ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಝಪಾಲಿ ಎಂಬ ಗ್ರಾಮದಲ್ಲಿ ನಡೆದಿರುವ ಘಟನೆ ಇದು. ತೀವ್ರವಾಗಿ ಗಾಯಗೊಂಡಿರುವ ವಧುವಿನ ತಂದೆ ಕಮಲ್ ಸಿಂಗ್ ನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಮಲ್ ಸಿಂಗ್ ಈ ಮೊದಲು ತನ್ನ ಸೋದರ ಸೊಸೆಯನ್ನು ಅದೇ ಮನೆಗೆ ಮದುವೆ ಮಾಡಿಕೊಟ್ಟಿದ್ದ. ಆದ್ರೆ ಆ ಕುಟುಂಬಸ್ಥರು ಅವಳನ್ನು ಹತ್ಯೆ ಮಾಡಿದ್ದಾರಂತೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಮಲ್ ಸಿಂಗ್, ತನ್ನ ಮಗಳ ಮದುವೆಯನ್ನು ರದ್ದು ಮಾಡಿದ್ದಾನೆ. ನಿಶ್ಚಿತಾರ್ಥ ಮುರಿದು ಬಿದ್ದಿದೆ. ಇದರಿಂದ ಸಿಟ್ಟಿಗೆದ್ದ ವರನ ಕಡೆಯವರು ದೊಣ್ಣೆ ಮತ್ತು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಕಮಲ್ ಸಿಂಗ್‌ನ ಮೂಗನ್ನೇ ಕತ್ತರಿಸಿ ಹಾಕಿದ್ದಾರೆ.