alex Certify 80 ರ ದಶಕದಲ್ಲಿ ತನ್ನ ತಂದೆಯ ಬೆಸ್ಟ್​ ಫ್ರೆಂಡ್​ ನೆರವನ್ನು ನೆನಪಿಸಿಕೊಂಡ ಮಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

80 ರ ದಶಕದಲ್ಲಿ ತನ್ನ ತಂದೆಯ ಬೆಸ್ಟ್​ ಫ್ರೆಂಡ್​ ನೆರವನ್ನು ನೆನಪಿಸಿಕೊಂಡ ಮಗಳು….!

ಕೆಲಸ ಹುಡುಕಾಟ ಸಂದರ್ಭದಲ್ಲಿ ನೆರವಾಗುವ ಸ್ನೇಹಿತರು ಬಹುಕಾಲ ನೆನಪಲ್ಲಿ ಉಳಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಪ್ರತಿಯೊಬ್ಬರಿಗೂ ಸ್ನೇಹಿತರ ನೆರವು ಸಿಕ್ಕಿರುತ್ತದೆ.

ಲಿಂಕ್ಡ್​ಇನ್​ನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸ್ಫೂರ್ತಿ ನೀಡಲು ಅನೇಕರು ಧನಾತ್ಮಕ ವಿಷಯದ ಪೋಸ್ಟ್​ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ರವಿನಾ ಮೋರ್​ ಎಂಬ ಮಹಿಳೆ ಹಂಚಿಕೊಂಡ ಪೋಸ್ಟ್​ ವೈರಲ್​ ಆಗಿದೆ.

ಜುಲೈ 04, 1985 ರ ತನ್ನ ತಂದೆಯ ಕೆಲಸದ ಅರ್ಜಿಯನ್ನು ಅವರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ತಂದೆಯ ಆತ್ಮೀಯ ಸ್ನೇಹಿತ ತನ್ನ ತಂದೆಗೆ ಉದ್ಯೋಗವನ್ನು ಪಡೆಯಲು ಸಹಾಯ ಮಾಡಲು ಅರ್ಜಿ ಬರೆದುಕೊಟ್ಟು ನೆರವಾಗಿದ್ದರು ಎಂದು ಉಲ್ಲೇಖಿಸಿದ್ದಾರೆ.

ಉದ್ದವಾದ ಪೋಸ್ಟ್​ನಲ್ಲಿ, ಆಕೆಯ ತಂದೆ 80ರ ದಶಕದಲ್ಲಿ ಪದವಿ ಪಡೆದರು ಮತ್ತು ಫ್ರೆಶರ್​ ಆಗಿ, ಅವರು ರೆಸ್ಯೂಮ್​ ಅನ್ನು ಡ್ರಾಫ್ಟ್ ಮಾಡಲು ಮತ್ತು ಅರ್ಜಿ ಬರೆಯಲು ತಲೆಕೆಡಿಸಿಕೊಂಡಿದ್ದರು.

ಆದರೆ, ಅವರ ಆತ್ಮೀಯ ಸ್ನೇಹಿತ ಪ್ರಕಾಶ್​ ಅಂಕಲ್​, ಸುಂದರವಾದ ಕೈ ಬರಹದಲ್ಲಿ ಇಂಗ್ಲಿಷ್​ನಲ್ಲಿ ಅರ್ಜಿ ಬರೆದುಕೊಟ್ಟಿದ್ದರು. 10 ಅಜಿರ್ಗಳನ್ನು ಬರೆಯುವುದರಿಂದ ಹಿಡಿದು ನನ್ನ ತಂದೆಯನ್ನು ಡ್ರೆಸ್ಸಿಂಗ್​ ಮಾಡಲು ಮತ್ತು ಸಂದರ್ಶನಗಳಲ್ಲಿ ಯಾವ ರೀತಿ ಮಾತನಾಡಬೇಕೆಂದು ನೆರವಾಗಿದ್ದರು ಎಂದು ವಿವರಿಸಿದ್ದಾರೆ

ತನ್ನ ತಂದೆ ತಪ್ಪುಗಳನ್ನು ಮಾಡುತ್ತಲೇ ಇದ್ದರು, ಆ ತಪ್ಪುಗಳನ್ನು ಅವರ ಗೆಳೆಯ ಎಂದಿಗೂ ಗಂಭೀರವಾಗಿ ಪರಿಗಣಿಸದೇ ಮತ್ತು ನಿರಂತರವಾಗಿ ತನ್ನ ತಂದೆಯನ್ನು ಪ್ರೋತ್ಸಾಹಿಸಿದ್ದರು ಎಂದು ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.

ಅವರ ಪ್ರಯತ್ನಗಳಿಗೆ ಧನ್ಯವಾದಗಳು, ನನ್ನ ತಂದೆ ಉತ್ತಮ ವೃತ್ತಿ ಜೀವನವನ್ನು ಹೊಂದಿದ್ದರು ಮತ್ತು ಮುಂದಿನ ವಾರ ನಿವೃತ್ತರಾಗಲಿದ್ದಾರೆ. ಪ್ರಕಾಶ್​ ಅಂಕಲ್​ ಇನ್ನೂ ಅವರ ಆತ್ಮೀಯ ಸ್ನೇಹಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಕಂಪ್ಯೂಟರ್​ ಮತ್ತು ಇಂಟರ್ನೆಟ್​ ಲಭ್ಯವಿಲ್ಲದಿದ್ದ ಸಮಯದಲ್ಲಿ, ರೆಸ್ಯೂಮ್​ಗಳನ್ನು ಕೈಯಿಂದ ಬರೆಯಲಾಗುತ್ತಿತ್ತು. ತಮ್ಮ ತಂದೆಗೆ ಅವರ ಆತ್ಮೀಯ ಸ್ನೇಹಿತರು ರೆಸ್ಯೂಮ್​ ಬರೆದುಕೊಟ್ಟಿದ್ದರು ಎಂದು ರವಿನಾ ಉಲ್ಲೇಖಿಸಿದ್ದಾರೆ.

No alternative text description for this image

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...