ಬಾಲಿವುಡ್ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿರುವ ಮತ್ತು ಕಾಮಿಕ್ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟ ಸತೀಶ್ ಶಾ ಅವರು ರಾಷ್ಟ್ರ ಧ್ವಜವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದರ ಬಗ್ಗೆ ಪರ – ವಿರೋಧ ಚರ್ಚೆ ನಡೆದಿದೆ.
ಸತೀಶ್ ಶಾ ಭಾರತದ ಧ್ವಜದೊಂದಿಗೆ ಪೋಸ್ ನೀಡಿದ್ದು, ಇದು 1942ರ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ತಮ್ಮ ತಾಯಿಗೆ ಸಿಕ್ಕಿದ್ದು ಎಂದು ಹೇಳಿಕೊಂಡಿದ್ದರು. ಆದರೆ, ಈ ರೂಪವು 1942ರಲ್ಲಿ ಅಸ್ತಿತ್ವದಲ್ಲಿಲ್ಲ. ಹಿಂದೆ ತ್ರಿವರ್ಣ ಧ್ವಜದ ಮೇಲೆ ಇರುವ ಅಶೋಕ ಚಕ್ರದ ಬದಲಿಗೆ ಚರಕ ಚಿಹ್ನೆ ಇತ್ತು ಎಂದು ನೆಟ್ಟಿಗರು ಅವರಿಗೆ ಪಾಠ ಮಾಡಿದ್ದಾರೆ.
1921ರಲ್ಲಿ ಭಾರತದ ತಾತ್ಕಾಲಿಕ ಸರ್ಕಾರದ ಧ್ವಜದ ಮೇಲೆ ಚರಕವನ್ನು ಸಂಕೇತವಾಗಿ ಅಳವಡಿಸಲಾಯಿತು. ಅಶೋಕ ಚಕ್ರವನ್ನು 1947ರಲ್ಲಿ ಬದಲಾಯಿಸಿತ್ತು.
ಸತೀಶ್ ಶಾ ಕಭಿ ಹಾನ್ ಕಭಿ ನಾ, ಹಮ್ ಆಪ್ಕೆ ಹೈ ಕೌನ್, ಕಹೋ ನಾ ಪ್ಯಾರ್ ಹೈ, ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಗಳ ಹೊರತು ಟಿವಿ ಶೋಗಳ ಮೂಲಕ ಹೆಚ್ಚು ಜನರಿಗೆ ಪರಿಚಯವಾಗಿದ್ದಾರೆ.
ಇದೀಗ ಅವರು ಹಿಡಿದ ಧ್ವಜದ ಬಗ್ಗೆ ಕೆಲವರು ಹೆಮ್ಮೆ ಎಂದು ಅಭಿಪ್ರಾಯ ನೀಡಿದರೆ ಮತ್ತೆ ಕೆಲವರು ಇತಿಹಾಸ ಕೆದಕಿ ಕುಟುಕಿದ್ದಾರೆ. ನಿಮ್ಮ ನಟನೆ ಬಗ್ಗೆ ಗೌರವವಿದೆ, ಆದರೆ, ಇಂತಹ ಸುಳ್ಳುಗಳನ್ನೇಕೆ ಹೇಳುತ್ತೀರಿ ಎಂದು ತರಾಟೆಗೂ ತೆಗೆದುಕೊಂಡಿದ್ದಾರೆ.
https://twitter.com/Thinkerks/status/1557184565416185856?ref_src=twsrc%5Etfw%7Ctwcamp%5Etweetembed%7Ctwterm%5E1557184565416185856%7Ctwgr%5E1a04c29e17ed4449ba53dee5facc5571e4528d74%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fsatish-shah-poses-with-indian-flag-claiming-its-from-1942-netizens-school-him-5723143.html