ಇತ್ತೀಚೆಗೆ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಪಾಂಡಾಗಳ ಗುಂಪಿನಲ್ಲಿರುವ ನಾಯಿಮರಿಯನ್ನು ಗುರುತಿಸುವ ಸವಾಲು ಎದುರಾಗಿದ್ದು, ಇದು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡಿದೆ.
ಹೌದು, ಇದೀಗ ವೈರಲ್ ಆಗಿರುವ ಆಪ್ಟಿಕಲ್ ಭ್ರಮೆಯಲ್ಲಿ ಪಾಂಡಾಗಳ ಗುಂಪಿನ ನಡುವೆ ನಾಯಿ ಅಡಗಿರುವುದನ್ನು ತೋರಿಸುತ್ತದೆ. ನೀವು 20 ಸೆಕೆಂಡ್ ಸಮಯದ ಮಿತಿಯೊಳಗೆ ನಾಯಿಯನ್ನು ಗುರುತಿಸುವ ಅಗತ್ಯವಿದೆ. ಈ ಭ್ರಮೆಯ ಚಿತ್ರದಲ್ಲಿ ನೀವು ಗುರುತಿಸಲು ಕಷ್ಟಕರವಾಗಿಸುವ ಮತ್ತೊಂದು ಅಡಚಣೆಯೆಂದರೆ ನಾಯಿಮರಿಯ ಚರ್ಮದ ಬಣ್ಣವು ಪಾಂಡಾಗಳಿಗೆ ಹೋಲುತ್ತದೆ. ಬಣ್ಣದಲ್ಲಿನ ಈ ಹೋಲಿಕೆಯು ನಾಯಿಮರಿಯನ್ನು ಪಾಂಡಾಗಳ ನಡುವೆ ಕೌಶಲ್ಯದಿಂದ ಮರೆಮಾಚುವಂತೆ ಮಾಡಿತು. ಸೂಕ್ಷ್ಮವಾಗಿ ಗಮನಿಸಿದರೆ, ನೀವು ನಾಯಿಮರಿಯನ್ನು ಹುಡುಕಲು ಸಾಧ್ಯವಾಗುತ್ತದೆ.
ಒಂದುವೇಳೆ ನಿಮಗೆ ಹುಡುಕಾಡಲು ಸಾಧ್ಯವಾಗದಿದ್ರೆ, ಸಮಸ್ಯೆಯನ್ನು ನಾವು ಪರಿಹರಿಸುತ್ತೇವೆ. ಮೂರನೇ ಸಾಲಿನಲ್ಲಿ ನಾಯಿಮರಿ ಇರುವ ಸ್ಥಳವನ್ನು ಕಂಡುಹಿಡಿಯಬಹುದು. ಅದರ ಮುಖವು ಪಾಂಡಾಗಳಂತೆಯೇ ತೋರುತ್ತದೆ. ಆದರೆ, ಪಾಂಡಾಗಳಿಗಿಂತ ಸ್ವಲ್ಪ ವಿಭಿನ್ನ ಮುಖಚರ್ಚೆ ಹೊಂದಿರುವುದನ್ನು ಕಾಣಬಹುದು. ಇನ್ನೂ ಗೊತ್ತಾಗಲಿಲ್ಲವೇ..? ಚಿತ್ರದಲ್ಲಿ ಇರುವ ಪ್ರಾಣಿಗಳ ಕಿವಿಗಳನ್ನು ಸರಿಯಾಗಿ ಗಮನಿಸಿ. ಪಾಂಡಾಗಳ ಕಿವಿಗಳು ಮೇಲ್ಮುಖವಾದ ಸ್ಥಿತಿಯಲ್ಲಿವೆ. ಆದರೆ, ನಾಯಿಮರಿಯ ಕಿವಿಗಳು ಬಾಗಿವೆ. ಹೀಗಾಗಿ ನಿಮಗೆ ನಾಯಿಮರಿ ಯಾವುದು ಎಂದು ಕಂಡುಹಿಡಿಯಲು ಇದೀಗ ಮತ್ತಷ್ಟು ಸುಲಭವಾಗಿರಬಹುದು.