ಮೇಷ ರಾಶಿ
ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಸಂಬಂಧಿಕರು ಮತ್ತು ಮಿತ್ರರ ಆಗಮನವಾಗಲಿದೆ. ವ್ಯಾಪಾರದ ನಿಮಿತ್ತ ಪ್ರವಾಸ ಮಾಡಬೇಕಾಗಿ ಬರಬಹುದು.
ವೃಷಭ ರಾಶಿ
ವ್ಯಾಪಾರಿಗಳಿಗೆ ಇಂದು ಶುಭ ದಿನ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಆರ್ಥಿಕ ಲಾಭ ಪ್ರಾಪ್ತಿಯಾಗಲಿದೆ. ವಿದೇಶದಲ್ಲಿ ನೆಲೆಸಿರುವ ಸ್ನೇಹಿತರು, ಸಂಬಂಧಿಕರಿಂದ ಶುಭ ಸಮಾಚಾರ ಬರಲಿದೆ.
ಮಿಥುನ ರಾಶಿ
ಯಾವುದೇ ಬಗೆಯ ಅನಿಷ್ಠಗಳಿಂದ ಪಾರಾಗಲು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಆಪರೇಶನ್ ಮಾಡಿಸಲು ಇವತ್ತಿನ ದಿನ ಅನುಕೂಲಕರವಾಗಿಲ್ಲ. ಖರ್ಚು ಹೆಚ್ಚಾಗಲಿದೆ.
ಕರ್ಕ ರಾಶಿ
ಇಂದು ಮನರಂಜನೆಯ ಕಡೆಗೆ ಹೆಚ್ಚಿನ ಗಮನ ಹರಿಸಲಿದ್ದೀರಿ. ಮಿತ್ರರು ಮತ್ತು ಕುಟುಂಬದವರೊಂದಿಗೆ ಸುತ್ತಾಡುವ ಅವಕಾಶ ದೊರೆಯಲಿದೆ. ಸ್ವಾದಿಷ್ಟ ಭೋಜನ, ವಸ್ತ್ರಾಭರಣ ಖರೀದಿಸಲಿದ್ದೀರಿ.
ಸಿಂಹ ರಾಶಿ
ನಿಮ್ಮ ಕುಟುಂಬದಲ್ಲಿ ಹರ್ಷೋಲ್ಲಾಸ ತುಂಬಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಆನಂದವಾಗಿ ಸಮಯ ಕಳೆಯಲಿದ್ದೀರಿ. ಶಾರೀರಿಕ ಆರೋಗ್ಯ ಉತ್ತಮವಾಗಿರುತ್ತದೆ.
ಕನ್ಯಾ ರಾಶಿ
ಮಕ್ಕಳ ಬಗ್ಗೆ ಚಿಂತೆ ಕಾಡಲಿದೆ. ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ವಿದ್ಯಾರ್ಥಿಗಳ ಓದಿನಲ್ಲಿ ವಿಘ್ನ ಎದುರಾಗಲಿದೆ. ಬೌದ್ಧಿಕ ಚರ್ಚೆ ಮತ್ತು ವಾದ ವಿವಾದದಲ್ಲಿ ತೊಡಗಬೇಡಿ.
ತುಲಾ ರಾಶಿ
ಇಂದು ಮಾನಸಿಕವಾಗಿ ಆಯಾಸದ ಅನುಭವವಾಗಲಿದೆ. ಹೆಚ್ಚು ಭಾವುಕರಾಗಿರುತ್ತೀರಿ. ಮನಸ್ಸಿನಲ್ಲಿ ಹತ್ತಾರು ಬಗೆಯ ಪ್ರಶ್ನೆಗಳು ಮೂಡಲಿವೆ. ನೀರಿನಿಂದ ದೂರವಿರಿ.
ವೃಶ್ಚಿಕ ರಾಶಿ
ಇಂದು ಖುಷಿಯಾಗಿ ದಿನ ಕಳೆಯಲಿದ್ದೀರಿ. ಸಹೋದರ ಸಹೋದರಿಯರ ಭೇಟಿಯಾಗಲಿದೆ. ಮಿತ್ರರ ಭೇಟಿಯಿಂದ ಮನಸ್ಸಿಗೆ ಆನಂದ ಸಿಗಲಿದೆ. ಲಘು ಪ್ರವಾಸ ಕೈಗೊಳ್ಳೋ ಸಾಧ್ಯತೆ ಇದೆ.
ಧನು ರಾಶಿ
ಇಂದು ನಿಮಗೆ ಮಿಶ್ರ ಫಲವಿದೆ. ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಜಗಳ ಏರ್ಪಡಬಹುದು. ಮಾನಸಿಕ ದೃಢತೆಯ ಕೊರತೆಯಿರುತ್ತದೆ. ದಿಢೀರ್ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಮಕರ ರಾಶಿ
ನಿಗದಿತ ಕೆಲಸಗಳೆಲ್ಲ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಕಚೇರಿಯಲ್ಲಿ ನಿಮ್ಮ ವರ್ಚಸ್ಸು ವೃದ್ಧಿಸುತ್ತದೆ. ಗೃಹಸ್ಥ ಜೀವನದಲ್ಲಿ ಸುಖ-ನೆಮ್ಮದಿಯ ಕೊರತೆ ಇರುವುದಿಲ್ಲ. ಆರೋಗ್ಯ ಉತ್ತಮವಾಗಿರುತ್ತದೆ.
ಕುಂಭ ರಾಶಿ
ಹಣಕಾಸು ವ್ಯವಹಾರದಲ್ಲಿ ಯಾರಿಗೂ ಸಹಕಾರ ನೀಡಬೇಡಿ. ಖರ್ಚು ಹೆಚ್ಚಾಗಲಿದೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಏರುಪೇರಾಗಬಹುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ.
ಮೀನ ರಾಶಿ
ಸಾಮಾಜಿಕ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ಮಿತ್ರರು ಮತ್ತು ಸಂಬಂಧಿಕರ ಭೇಟಿಯಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ. ಸುಂದರ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ.