ಕೊಡಗು: ಪತಿಯೇ ಪತ್ನಿಯನ್ನು ಗುಂಡಿಟ್ಟು ಕೊಂದ ಘಟನೆ ಕೊಡಗು ಜಿಲ್ಲೆಯ ಚೇರಳ ಶ್ರೀಮಂಗಲದಲ್ಲಿ ನಡೆದಿದೆ.
43 ವರ್ಷದ ಸುಶ್ಮಾ ಪತಿಯಿಂದ ಕೊಲೆಯಾದ ಮಹಿಳೆ. ಕಿಶನ್ ಪತ್ನಿಯ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ. ಕೌಟುಂಬಿಕ ಕಲಹದಿಂದ ಕೋಪಗೊಂಡ ಪತಿ ಮಹಾಶಯ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.