ಉದ್ಯಮ, ಕ್ರೀಡೆ ಮತ್ತು ಐಟಿ ಕ್ಷೇತ್ರದ ದಿಗ್ಗಜರು ಕ್ರಿಕೆಟ್ ಪೆವಿಲಿಯನ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರೊಂದಿಗೆ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯವನ್ನು ವೀಕ್ಷಿಸಿದ್ದಾರೆ.
ಮೂವರೂ ಒಟ್ಟಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಕ್ಷಣಾರ್ಧದಲ್ಲಿ ಅದು ವೈರಲ್ ಆಗಿದೆ.
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕ್ರಿಕೆಟ್‌ನ ಹೊಸ ಸ್ವರೂಪದ ಎರಡನೇ ಸೀಸನ್ ದಿ ಹಂಡ್ರೆಡ್- 2022 ಆರಂಭವಾಗಿದ್ದು, ಪ್ರಸ್ತುತ ಸ್ಕೈ ಸ್ಪೋರ್ಟ್ಸ್‌ಗೆ ಶಾಸ್ತ್ರಿ ಕಾಮೆಂಟರಿ ಮಾಡುತ್ತಿದ್ದಾರೆ.
ʼದಿ ಹಂಡ್ರೆಡ್ʼನ ಉದ್ಘಾಟನಾ ಸೀಸನ್ ಕಳೆದ ವರ್ಷ ದೊಡ್ಡ ಹಿಟ್ ಆಗಿತ್ತು. ಅತ್ಯಂತ ಜನಪ್ರಿಯವಾದ ಇಂಡಿಯನ್ ಪ್ರೀಮಿಯರ್ ಲೀಗ್ ನಂತರ ʼದಿ ಹಂಡ್ರೆಡ್ʼ ಅನ್ನು ರೂಪಿಸಲಾಗಿದೆ. ಪ್ರತಿ ಇನ್ನಿಂಗ್ಸ್‌ಗೆ 100 ಎಸೆತಗಳನ್ನು ನಿಗದಿಪಡಿಸಿರುವುದರಿಂದ ಸ್ಪರ್ಧೆಯು ಟಿ20 ಕ್ರಿಕೆಟ್‌ಗಿಂತ ಭಿನ್ನವಾಗಿದೆ.
ಹಂಡ್ರೆಡ್‌ನಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್ ಪರಿಣಿತರಾದ ಕೀರಾನ್ ಪೊಲಾರ್ಡ್, ಡ್ವೇನ್ ಬ್ರಾವೋ, ಡೇವಿಡ್ ಮಿಲ್ಲರ್, ಆಂಡ್ರೆ ರಸೆಲ್ ಮತ್ತು ಆಡಮ್ ಝಂಪಾ ಇದ್ದಾರೆ.
ಆಗಸ್ಟ್ 3ರಂದು ನಡೆದ ಈ ಸೀಸನ್ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸದರ್ನ್ ಬ್ರೇವ್ಸ್ ವೆಲ್ಷ್ ಫೈರ್ ತಂಡವನ್ನು ಎದುರಿಸಿದರು.