alex Certify ಭಾರತೀಯ ಅತ್ತೆಯೊಂದಿಗೆ ಮಲಯಾಳಂನಲ್ಲಿ ಮಾತನಾಡಿದ ಅಮೆರಿಕನ್…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಅತ್ತೆಯೊಂದಿಗೆ ಮಲಯಾಳಂನಲ್ಲಿ ಮಾತನಾಡಿದ ಅಮೆರಿಕನ್…! ವಿಡಿಯೋ ವೈರಲ್

ನೀವು ಪ್ರೀತಿಸುವ ವ್ಯಕ್ತಿಯು ನಿಮಗೆ ಸಂತೋಷವನ್ನುಂಟು ಮಾಡುವ ಕೆಲಸ ಮಾಡಿದ್ರೆ ಪ್ರಪಂಚದಲ್ಲಿ ನಿಮ್ಮಷ್ಟು ಸಂತೋಷ ಪಡುವವರು ಬಹುಶಃ ಯಾರೂ ಇರಲಿಕ್ಕಿಲ್ಲ. ಇದೀಗ ಇಲ್ಲೊಬ್ಬರು ಮಹಿಳೆಗೂ ಇದೇ ರೀತಿಯ ಅನುಭವವಾಗಿದೆ. ಮಲಯಾಳಂನಲ್ಲಿ ತನ್ನ ವಿವಾಹದ ಪ್ರತಿಜ್ಞೆಯನ್ನು ಹೇಳಿದ ಆಫ್ರಿಕನ್-ಅಮೆರಿಕನ್ ವ್ಯಕ್ತಿಯ ನೆನಪಿದೆಯೇ..? ಇದೀಗ ಅವರು ತಮ್ಮ ಅತ್ತೆಯೊಂದಿಗೆ ಮಲಯಾಳಂನಲ್ಲಿ ಮಾತನಾಡುವ ಮತ್ತೊಂದು ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಜೆನೋವಾ ಜೂಲಿಯನ್ ಪ್ರಯೋರ್ ಅವರು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಆಕೆಯ ಪತಿ ಡೆನ್ಜೆಲ್ ತನ್ನ ಅತ್ತೆಯೊಂದಿಗೆ ಮಲಯಾಳಂನಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು. ಅವರು ಬೆಳಗಿನ ಉಪಾಹಾರದ ಬಗ್ಗೆ ಮಾತನಾಡಿದ್ದಾರೆ. ಉಪ್ಮಾ ತಿನ್ನಲು ಸಿದ್ಧವಾಗಿದೆ ಎಂದಾಗ, ಡೆನ್ಜೆಲ್ ಅವರ ಅತ್ತೆ ಮಲಯಾಳಂನಲ್ಲಿ ಮಾತನಾಡಿದ್ದಾರೆ. ಅವರ ಮಾತನಾಡಿದ್ದನ್ನು ಅರ್ಥ ಮಾಡಿಕೊಂಡಿದ್ದಾರೆ. ಇದನ್ನು ಕೇಳಿ ಅವರ ಅತ್ತೆ ಮತ್ತು ಪತ್ನಿ ಆತನನ್ನು ಹುರಿದುಂಬಿಸಿದ್ದಾರೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋ 3.3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೋ ಅನೇಕರ ಮನಗೆದ್ದಿದೆ. ಮದುವೆಯ ಸಮಯದಲ್ಲಿ ಡೆನ್ಜೆಲ್ ಅವರು ತಮ್ಮ ವಧುವಿಗೆ ಮಲಯಾಳಂನಲ್ಲಿ ತಮ್ಮ ವಿವಾಹದ ಪ್ರತಿಜ್ಞೆಯನ್ನು ಹೇಳಿದ್ದರು. ಈ ವಿಡಿಯೋವೊಂದು ಭಾರಿ ವೈರಲ್ ಆಗಿತ್ತು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...