ಬೆಂಗಳೂರು: ಕೆಎಂಎಫ್ ನೌಕರ ಕೂಡ ಭ್ರಷ್ಟಾಚಾರ ತಡೆ ಕಾಯ್ದೆ ವ್ಯಾಪ್ತಿಗೆ ಬರುತ್ತಾರೆ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ.
ನಂದಿನಿ ಮಿಲ್ಕ್ ಜನರಲ್ ಮ್ಯಾನೇಜರ್ ವಿ. ಕೃಷ್ಣಾರೆಡ್ಡಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. 2021 ರ ನವೆಂಬರ್ 20 ರಂದು ಎಸಿಬಿ ದಾಳಿ ನಡೆಸಿ ಕೇಸ್ ದಾಖಲಿಸಿಕೊಂಡಿತ್ತು. ಕೃಷ್ಣಾರೆಡ್ಡಿ ಆದಾಯ ಮೀರಿ ಶೇಕಡ 107 ರಷ್ಟು ಆಸ್ತಿ ಹೊಂದಿದ ಆರೋಪ ಕೇಳಿ ಬಂದಿತ್ತು.
ಪ್ರಕರಣ ರದ್ದು ಕೋರಿ ವಿ. ಕೃಷ್ಣಾರೆಡ್ಡಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಕೆಎಂಎಫ್ ಸಿಬ್ಬಂದಿ ಸರ್ಕಾರಿ ನೌಕರರಲ್ಲವೆಂದು ವಾದ ಮಂಡಿಸಿದ್ದರು. ಹೀಗಾಗಿ ಭ್ರಷ್ಟಾಚಾರ ತಡೆ ಕಾಯಿದೆ ವ್ಯಾಪ್ತಿಗೆ ಕೆಎಂಎಫ್ ಸಿಬ್ಬಂದಿ ಬರುವುದಿಲ್ಲವೆಂದು ವಾದಿಸಿದ್ದರು. ಅರ್ಜಿದಾರರ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ. ಕೆಎಂಎಫ್ ನೌಕರ ಕೂಡ ಭ್ರಷ್ಟಾಚಾರ ತಡೆ ಕಾಯಿದೆಗೆ ಒಳಪಡುತ್ತಾರೆ. ಅರ್ಜಿದಾರನ ಮೇಲೆ ಆದಾಯ ಮೀರಿ ಆಸ್ತಿ ಭ್ರಷ್ಟಾಚಾರ ದೇಶದ ಜನಜೀವನವನ್ನು ಆವರಿಸಿದೆ ಸಂವಿಧಾನದ ಆಡಳಿತಕ್ಕೆ ಭ್ರಷ್ಟಾಚಾರ ಅಪಾಯಕಾರಿಯಾಗಿದೆ.ಬೇರೆ ಬೇರೆ ಸ್ವರೂಪಗಳಲ್ಲಿ ಲಂಚಗುಳಿತನ ವ್ಯಾಪಿಸಿದೆ. ಉತ್ತಮ ಆಡಳಿತಕ್ಕಾಗಿ ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ ಅನಿವಾರ್ಯವಾಗಿದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಆದೇಶ ನೀಡಿದೆ.