ಬಹುತೇಕ ರಾಜಕಾರಣಿಗಳು ಅಕ್ರಮ ಆಸ್ತಿ ಹೊಂದಿರುವ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ಪುಷ್ಠಿ ನೀಡುವಂತೆ ಸಿಬಿಐ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭ್ರಷ್ಟ ರಾಜಕಾರಣಿಗಳ ನಿವಾಸದ ಮೇಲೆ ದಾಳಿ ಮಾಡಿದ ವೇಳೆ ಕೋಟ್ಯಾಂತರ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗುತ್ತದೆ.
ಆದರೆ ಇದಕ್ಕೆ ಅಪವಾದ ಎಂಬಂತೆ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಆಸ್ತಿ ಮಾಡಿಕೊಳ್ಳುವ ಗೋಜಿಗೆ ಹೋಗದೆ ತಮಗಿದ್ದ ಒಂದೇ ಒಂದು ಸ್ಥಿರಾಸ್ತಿಯನ್ನು ಸಹ ದಾನ ಮಾಡಿದ್ದಾರೆ. ಅಲ್ಲದೆ ಅವರ ಬ್ಯಾಂಕ್ ಬ್ಯಾಲೆನ್ಸ್ ಕೇವಲ 1,52,480 ರೂಪಾಯಿಗಳು ಎಂದರೆ ನೀವು ನಂಬಲೇಬೇಕು. ಪ್ರಧಾನಿಯವರ ಕಾರ್ಯಾಲಯ ಖುದ್ದು ನರೇಂದ್ರ ಮೋದಿ ಅವರ ಆಸ್ತಿ ವಿವರ ಘೋಷಿಸಿದೆ.
ನರೇಂದ್ರ ಮೋದಿಯವರ ಕುಟುಂಬ ಗುಜರಾತ್ ನಲ್ಲಿ ನಿವೇಶನ ಒಂದನ್ನು ಹೊಂದಿದ್ದು, ಇದರಲ್ಲಿ ಮೋದಿಯವರು ಶೇಕಡ 25ರಷ್ಟು ಪಾಲು ಹೊಂದಿದ್ದರು. ಇದನ್ನು ಸಹ ನರೇಂದ್ರ ಮೋದಿಯವರು ದಾನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೇವಲ 35,250 ರೂಪಾಯಿ ನಗದನ್ನು ಹೊಂದಿದ್ದಾರೆ.