ನಿರಂತರವಾಗಿ ಸುರಿಯುತ್ತಿರುವ ರಣಚಂಡಿ ಮಳೆಗೆ ಕರುನಾಡು ತತ್ತರಿಸಿಹೋಗಿದ್ದು, ಮನೆ ಕುಸಿತವಾಗುವುದರ ಜೊತೆಗೆ ಬೆಳೆ ಹಾನಿಯೂ ಸಂಭವಿಸಿರುವುದರಿಂದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಈ ಬಾರಿ ಮುಂಗಾರು ಸಕಾಲಕ್ಕೆ ಶುರುವಾದರೂ ಸಹ ಆರಂಭದಲ್ಲಿ ಮಳೆಯಾಗಿರಲಿಲ್ಲ. ಆನಂತರ ಉತ್ತಮ ಮಳೆಯಾಗಿದ್ದು, ಬೆಳೆಯು ನಳನಳಿಸುತ್ತಿತ್ತು. ಹೀಗಾಗಿ ಒಳ್ಳೆಯ ಫಸಲು ಬಂದು ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದ ರೈತರು ಆಶ್ಲೇಷ ಮಳೆಯ ಅಬ್ಬರಕ್ಕೆ ಕಂಗಾಲಾಗಿ ಹೋಗಿದ್ದಾರೆ.
ಸುರಿಯುತ್ತಿರುವ ಮಳೆಯಿಂದಾಗಿ ಕೆರೆಕಟ್ಟೆಗಳು ತುಂಬಿ ಹರಿಯುತ್ತಿರುವ ಕಾರಣ ಬೆಳೆದ ಬೆಳೆ ನೀರು ಪಾಲಾಗಿದೆ. ಇದರಿಂದಾಗಿ ಬೆಳೆದ ಅಸಲು ಕೂಡ ರೈತರಿಗೆ ಬರುವುದು ಅನುಮಾನವಾಗಿದೆ. ಮಳೆ ಇದೇ ರೀತಿ ಮುಂದುವರೆದರೆ ಮತ್ತಷ್ಟು ಸಂಕಷ್ಟಕರ ಪರಿಸ್ಥಿತಿ ಎದುರಾಗಲಿದೆ.