ದೇಶದೆಲ್ಲೆಡೆ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿದೆ. ಸಹೋದರಿಯರು ಸಹೋದರನಿಗೆ ರಕ್ಷೆಯಾಗಿ ರಾಖಿ ಕಟ್ಟುತ್ತಿದ್ದಾರೆ. ತಿಲಕವಿಟ್ಟು, ಆರತಿ ಬೆಳಗಿ, ಸಿಹಿ ತಿನ್ನಿಸುವ ಪದ್ಧತಿ ನಮ್ಮಲ್ಲಿದೆ. ರಕ್ಷಾ ಬಂಧನದ ದಿನ ರಾಖಿ ಕಟ್ಟಿಸಿಕೊಂಡ ಸಹೋದರರು ಸಹೋದರಿಗೆ ಉಡುಗೊರೆ ನೀಡ್ತಾರೆ. ಈ ಉಡುಗೊರೆ ಕೂಡ ಮಹತ್ವ ಪಡೆಯುತ್ತದೆ. ಮನಸ್ಸಿಗೆ ಬಂದ ಉಡುಗೊರೆ ನೀಡುವಂತಿಲ್ಲ.
ಜೋತಿಷ್ಯ ಶಾಸ್ತ್ರದ ಪ್ರಕಾರ, ಸಹೋದರ ಎಂದೂ ಸಹೋದರಿಗೆ ನಕಲಿ ಆಭರಣವನ್ನು ನೀಡಬಾರದು. ಹಾಗೆ ಚೂಪಾದ, ಹಾನಿ ಮಾಡುವಂತಹ ಆಭರಣ ನೀಡಬಾರದು.
ಸಹೋದರಿಗೆ ಕಪ್ಪು ಬಟ್ಟೆಯನ್ನು ನೀಡಬೇಡಿ. ಇದ್ರಿಂದ ಕಷ್ಟ ಹಾಗೂ ನಷ್ಟ ಎದುರಾಗುತ್ತದೆ.
ಸಹೋದರ, ಸಹೋದರಿಗೆ ಚಪ್ಪಲಿ, ಶೂ ವನ್ನು ಈ ದಿನ ನೀಡಬಾರದು. ಇದು ಸಂಬಂಧವನ್ನು ಹಾಳು ಮಾಡುತ್ತದೆ.
ಹಾಗೆ ಸಹೋದರಿಗೆ ಉಡುಗೊರೆ ರೂಪದಲ್ಲಿ ಕರವಸ್ತ್ರ ನೀಡಬಾರದು. ಇದು ವ್ಯಕ್ತಿಯ ಜೀವನಕ್ಕೆ ತೊಂದರೆಯುಂಟು ಮಾಡುತ್ತದೆ.
ರಕ್ಷಾ ಬಂಧನದ ದಿನ ಸಹೋದರರು ವಾಚ್ ನೀಡ್ತಾರೆ. ಆದ್ರೆ ಇದು ಸಹೋದರಿ ಪ್ರಗತಿಗೆ ಅಡ್ಡಿಯುಂಟು ಮಾಡುತ್ತದೆ.
ಸಹೋದರಿಗೆ ಫೋಟೋ ಫ್ರೇಮ್ ಹಾಗೂ ಗ್ಲಾಸಿನ ವಸ್ತುವನ್ನೂ ನೀಡಬಾರದು.