ರಕ್ಷಾಬಂಧನಕ್ಕೆ ಇನ್ನೊಂದು ದಿನ ಬಾಕಿಯಿದೆ. ಎಲ್ಲೆಡೆ ತಯಾರಿ ಶುರುವಾಗಿದೆ. ಸಹೋದರಿಯರು ಸಹೋದರರಿಗೆ ರಾಖಿ ಕಟ್ಟುತ್ತಾರೆ. ಸಹೋದರರು, ಸಹೋದರಿಯರಿಗೆ ಉಡುಗೊರೆ ನೀಡ್ತಾರೆ.
ಹಾಗೆ ಸಹೋದರಿಯರು ಕೂಡ ಸಹೋದರರಿಗೆ ಉಡುಗೊರೆ ನೀಡ್ತಾರೆ. ಸಹೋದರಿಯರು ಸಹೋದರರಿಗೆ ಲಾಭದಾಯಕ, ಶುಭ ತರುವ ಉಡುಗೊರೆಯನ್ನು ನೀಡಬೇಕು. ರಾಶಿಗನುಗುಣವಾಗಿ ಉಡುಗೊರೆ ನೀಡಿದ್ರೆ ಒಳ್ಳೆಯದು.
ಮೇಷ : ಈ ರಾಶಿಯವರಿಗೆ ಉದಯಿಸುತ್ತಿರುವ ಸೂರ್ಯನ ಫೋಟೋ ನೀಡಬಹುದು.
ವೃಷಭ : ಬಿಳಿ ಉಣ್ಣೆಯನ್ನು ಅರ್ಪಿಸಬೇಕು
ಮಿಥುನ : ಹಸಿರು ಉದ್ಯಾನವನದ ಫೋಟೋ ನೀಡಬಹುದು.
ಕರ್ಕ : ಧಾರ್ಮಿಕ ಪುಸ್ತಕವನ್ನು ನೀಡಬೇಕು.
ಸಿಂಹ : ರತ್ನವನ್ನು ಉಡುಗೊರೆಯಾಗಿ ನೀಡಿ.
ಕನ್ಯಾ : ಸಹೋದರನ ಪತ್ನಿಗೆ ಬಟ್ಟೆಯನ್ನು ನೀಡಬಹುದು.
ತುಲಾ : ಚಂದ್ರನ ಫೋಟೋ ನೀಡಿದ್ರೆ ಶುಭಕರ.
ವೃಶ್ಚಿಕ : ಕೆಂಪು ಉಣ್ಣೆಯನ್ನು ನೀಡಿ.
ಧನು : ಹಿತ್ತಾಳೆ ವಸ್ತುವನ್ನು ಉಡುಗೊರೆ ನೀಡಿ.
ಮಕರ : ವಿದ್ಯುತ್ ಗೆ ಸಂಬಂಧಿಸಿದ ವಸ್ತುವನ್ನು ನೀಡಿ.
ಕುಂಭ : ರತ್ನವನ್ನು ನೀಡಿ.
ಮೀನ : ಆಕಾಶ ಅಥವಾ ನಕ್ಷತ್ರದ ಫೋಟೋವನ್ನು ನೀಡಿ.