75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಗೆ ದೇಶದಾದ್ಯಂತ ಸಕಲ ಸಿದ್ಧತೆ ನಡೆದಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಚಾಲನೆ ನೀಡಿದೆ. ದೇಶವಾಸಿಗಳ ಪ್ರತಿಯೊಬ್ಬರ ಮನೆಯಲ್ಲೂ ಈ ಸಂದರ್ಭದಲ್ಲಿ ತ್ರಿವರ್ಣ ಧ್ವಜ ಕಂಗೊಳಿಸಲಿದೆ.
ಕೋಟೆ ನಾಡು ಚಿತ್ರದುರ್ಗದಲ್ಲೂ ಸಹ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಸಿದ್ಧತೆ ನಡೆದಿದ್ದು, ಐತಿಹಾಸಿಕ ಕಲ್ಲಿನ ಕೋಟೆಯಲ್ಲಿ ತ್ರಿವರ್ಣ ಧ್ವಜದ ಬಣ್ಣದ ಲೈಟಿಂಗ್ಸ್ ನೋಡುಗರ ಮನ ಸೆಳೆಯುತ್ತಿದೆ. ಆಗಸ್ಟ್ 3ರಿಂದ ಆರಂಭವಾಗಿರುವ ತ್ರಿವರ್ಣ ಧ್ವಜ ಬಣ್ಣದ ಈ ವಿದ್ಯುತ್ ದೀಪಾಲಂಕಾರ ಆಗಸ್ಟ್ 16ರ ವರೆಗೆ ಮುಂದುವರಿಯಲಿದೆ.
ಸಂಜೆ ನಂತರ ಕೋಟೆಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧವಿರುವ ಹಿನ್ನೆಲೆಯಲ್ಲಿ ದೂರದಿಂದಲೇ ಜನ ತ್ರಿವರ್ಣ ಧ್ವಜ ಬಣ್ಣದ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸುರಿಯುವ ಮಳೆ ನಡುವೆಯೂ ಈ ದೀಪಾಲಂಕಾರ ಎಲ್ಲರ ಕಣ್ಮನ ಸೆಳೆದಿದೆ.