ರಜಾ ದಿನವಾದ ಭಾನುವಾರದಂದು ಕುಟುಂಬ ಸಮೇತ ಪ್ರಕೃತಿ ಸೌಂದರ್ಯವನ್ನು ಸವಿಯಲು ಕಾರಿನಲ್ಲಿ ಬಂದಿದ್ದವರು ಆಘಾತ ಅನುಭವಿಸಿದ್ದಾರೆ. ಏಕಾಏಕಿ ನದಿ ನೀರಿನ ಮಟ್ಟ ಏರಿಕೆಯಾದ ಕಾರಣ ಕನಿಷ್ಠ 14 ಕಾರುಗಳು ಕೊಚ್ಚಿ ಹೋಗಿವೆ.
ಇಂಥದೊಂದು ಘಟನೆ ಮಧ್ಯಪ್ರದೇಶದ ಖರ್ಗೊನ್ ಜಿಲ್ಲೆಯ ಖಾಟಕೂಟ್ ಅರಣ್ಯದ ಬಳಿ ನಡೆದಿದೆ. ಸುಕ್ದಿ ನದಿ ಬಳಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದರು.
ಈ ವೇಳೆ ಬಾರಿ ಮಳೆಯ ಕಾರಣ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಹೀಗಾಗಿ ಜನರು ತಮ್ಮ ಕಾರುಗಳನ್ನು ಮರೆತು ಜೀವ ಉಳಿಸಿಕೊಳ್ಳುವ ಸಲುವಾಗಿ ಎದ್ದು ಬಿದ್ದು ಎತ್ತರದ ಪ್ರದೇಶಕ್ಕೆ ಓಡಿದ್ದಾರೆ. ಈ ಸಂದರ್ಭದಲ್ಲಿ 14 ಕಾರುಗಳು ನದಿ ನೀರಿನಲ್ಲಿ ಕೊಚ್ಚಿಹೋಗಿವೆ.