
ಸ್ನೇಹದ ಅರ್ಥಪೂರ್ಣ ಬಂಧವು ವಯಸ್ಸು, ಲಿಂಗ, ಗಡಿ, ಭಾಷೆ, ಧರ್ಮವನ್ನು ಮೀರಿದೆ. ಸ್ನೇಹವು ಯಾವಾಗಲೂ ಇಬ್ಬರು ವ್ಯಕ್ತಿಗಳ ನಡುವೆ ಇರಬೇಕಾಗಿಲ್ಲ. ಅದು ನಿಮ್ಮ ಸಾಕು ನಾಯಿಯೊಂದಿಗಿನ ಸಂಬಂಧವು ಕೂಡ ಅಷ್ಟೇ ಅರ್ಥಪೂರ್ಣವಾಗಿರುತ್ತದೆ. ಇದೀಗ ಉದ್ಯಮಿ ಹರ್ಷ್ ಗೋಯೆಂಕಾ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋ ಈ ವಿವರಿಸಲಾಗದ ಬಂಧದ ಬಗ್ಗೆ ಹೇಳುತ್ತದೆ. ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.
ಹೌದು, ಮಹಿಳೆಯೊಬ್ಬಳನ್ನು ಹಲವಾರು ಬೀದಿ ನಾಯಿಗಳು ಸ್ವಾಗತಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆಕೆಯನ್ನು ಹಿಂಡಾಗಿ ಬಂದು ಶ್ವಾನಗಳು ತಬ್ಬಿಕೊಳ್ಳಲು ಪ್ರಯತ್ನಿಸುತ್ತದೆ. ಈ ವಿಡಿಯೋವನ್ನು ಟ್ವಿಟರ್ ಬಳಕೆದಾರ ಅಜಯ್ ಜೋ ಹಂಚಿಕೊಂಡಿದ್ದು, ಇದು 53,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆಯನ್ನು ಹಲವಾರು ನಾಯಿಗಳು ಸ್ವಾಗತಿಸುತ್ತಿವೆ. ಎಲ್ಲಾ ನಾಯಿಗಳು ಮಹಿಳೆಯ ಸುತ್ತಲೂ ತಮ್ಮ ಪ್ರೀತಿಯನ್ನು ತೋರಿಸುತ್ತಿವೆ. ಬಹುಶಃ ಆಕೆ ಈ ನಾಯಿಗಳನ್ನು ನೋಡಿಕೊಳ್ಳುತ್ತಾಳೆ ಮತ್ತು ಅವುಗಳಿಗೆ ಆಹಾರವನ್ನು ನೀಡುತ್ತಾಳೆ ಎಂದು ತೋರುತ್ತದೆ. ಹೀಗಾಗಿ ಶ್ವಾನಗಳು ತಮ್ಮ ಪ್ರೀತಿಯನ್ನು ಸುರಿಸಿದ್ದಾವೆ.
ಆಗಸ್ಟ್ 7 ರ ಫ್ರೆಂಡ್‌ಶಿಪ್ ಡೇ ಯಂದು ಹರ್ಷ್ ಗೋಯೆಂಕಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇಂಟರ್ನೆಟ್ ಈ ವಿಡಿಯೋವನ್ನು ಸಂಪೂರ್ಣವಾಗಿ ಪ್ರೀತಿಸುತ್ತಿದೆ. ಕಾಮೆಂಟ್‌ಗಳ ವಿಭಾಗವು ಹೃದಯ ಮತ್ತು ಪ್ರೀತಿಯ ಎಮೋಜಿಗಳಿಂದ ತುಂಬಿದೆ. ಈ ವೀಡಿಯೊವನ್ನು ಹಂಚಿಕೊಂಡಿದ್ದಕ್ಕಾಗಿ ಜನರು ಹರ್ಷ್ ಗೋಯೆಂಕಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.