ಫೆಂಗ್ ಶೂಯಿ ಪ್ರಕಾರ ಮನೆಯ ಸರಿಯಾದ ದಿಕ್ಕಿನಲ್ಲಿ ಸ್ನಾನ ಗೃಹವಿಲ್ಲವಾದಲ್ಲಿ ಪ್ರಗತಿಗೆ ಅಡ್ಡಿಯುಂಟಾಗುತ್ತದೆ. ಮನೆಯ ಕೇಂದ್ರ ಸ್ಥಾನದಲ್ಲಿ ಸ್ನಾನ ಗೃಹ ಇರಬಾರದು. ಈಶಾನ್ಯ ದಿಕ್ಕಿನಲ್ಲಿ ಸ್ನಾನ ಗೃಹವಿದ್ದರೆ ಮಕ್ಕಳ ಓದಿನ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ ಮನೆಯಲ್ಲಿ ವಾಸವಾಗಿರುವವರ ಮೇಲೆ ಮಾನಸಿಕ ಪ್ರಭಾವ ಬೀರುತ್ತದೆ.
ಈಶಾನ್ಯ ಭಾಗದಲ್ಲಿ ಸ್ನಾನ ಗೃಹವಿರೋದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ದಕ್ಷಿಣ, ಪಶ್ಚಿಮ ಮತ್ತು ಪೂರ್ವ ದಿಕ್ಕು ಸ್ನಾನ ಗೃಹಕ್ಕೆ ಉತ್ತಮ. ನಿಮ್ಮ ಮನೆಯ ಸ್ನಾನ ಗೃಹ ಸರಿಯಾದ ಸ್ಥಾನದಲ್ಲಿಲ್ಲ ಎಂದಾದಲ್ಲಿ ಚಿಂತೆ ಮಾಡುವ ಅಗತ್ಯವಿಲ್ಲ. ಫಿಂಗ್ ಶೂಯಿಯಲ್ಲಿ ಇದಕ್ಕೂ ಪರಿಹಾರ ಹೇಳಲಾಗಿದೆ. ಸಣ್ಣಪುಟ್ಟ ಬದಲಾವಣೆಯಿಂದ ದೋಷ ನಿವಾರಣೆ ಮಾಡಬಹುದಾಗಿದೆ.
ಸ್ನಾನ ಮಾಡಲು ನಾವು ಸ್ನಾನ ಗೃಹ ಪ್ರವೇಶ ಮಾಡುವ ವೇಳೆ ಕೆಲವು ನಕಾರಾತ್ಮಕ ಶಕ್ತಿಗಳು ನಮ್ಮ ಜೊತೆ ಸ್ನಾನ ಗೃಹ ಪ್ರವೇಶ ಮಾಡುತ್ತವೆ. ಗೋಡೆಗೆ ಕನ್ನಡಿ ಅಳವಡಿಸಿದಲ್ಲಿ ನಕಾರಾತ್ಮಕ ಶಕ್ತಿ ದಿಕ್ಕು ಬದಲಿಸಿ ಮತ್ತೆ ಮನೆ ಪ್ರವೇಶ ಮಾಡುತ್ತದೆ.
7-10 ದಿನಗಳ ಒಳಗೆ ಸ್ನಾನ ಗೃಹವನ್ನು ಸ್ವಚ್ಛ ಮಾಡಬೇಕಾಗುತ್ತದೆ.
ಫಿಂಗ್ ಶೂಯಿ ಪ್ರಕಾರ ಸ್ನಾನ ಗೃಹದಲ್ಲಿ ನೀಲಿ ಬಣ್ಣದ ಬಕೆಟ್ ಇಡುವುದು ಶುಭ. ಒಂದು ವೇಳೆ ಬೇರೆ ಬಣ್ಣದ ಬಕೆಟ್ ಇದ್ದಲ್ಲಿ ಆತಂಕಪಡುವ ಅಗತ್ಯವಿಲ್ಲ. ಅದನ್ನೇ ಬಳಸಿ. ಆದ್ರೆ ಸದಾ ಬಕೆಟ್ ನಲ್ಲಿ ನೀರಿರುವಂತೆ ನೋಡಿಕೊಳ್ಳಿ. ಇದು ಜೀವನದಲ್ಲಿ ಸುಖ-ಸಂತೋಷ ನೆಲೆಸಲು ಸಹಕಾರಿ.
ಸ್ನಾನ ಗೃಹದಲ್ಲಿ ಬಳಸುವ ಸೋಪ್, ಶ್ಯಾಂಪೂ, ಟವೆಲ್ ಸೇರಿದಂತೆ ಎಲ್ಲ ವಸ್ತುಗಳು ಸುವಾಸನೆಯಿಂದ ಕೂಡಿರಲಿ.