
ವಾರದ ಮೊದಲ ವಹಿವಾಟಿನ ದಿನವಾದ ಇಂದು ಚಿನ್ನ-ಬೆಳ್ಳಿ ದರಗಳಲ್ಲಿ ಬದಲಾವಣೆಯಾಗಿದೆ. ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದ್ದರಿಂದ ಭಾರತೀಯ ಮಾರುಕಟ್ಟೆಯ ಟ್ರೆಂಡ್ ಬದಲಾಗಿದೆ.
ಮತ್ತೊಂದೆಡೆ ಜಾಗತಿಕ ಮಾರುಕಟ್ಟೆಯ ಸಂಕೇತಗಳ ನಡುವೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತವಾಗಿದೆ. ಚಿನ್ನದ ಬೆಲೆ 52 ಸಾವಿರದಿಂದ ಕೆಳಕ್ಕಿಳಿದರೆ, ಬೆಳ್ಳಿ 57 ಸಾವಿರಕ್ಕೂ ಹೆಚ್ಚಿದೆ.
MCX ನಲ್ಲಿ ಇಂದು ಚಿನ್ನದ ದರ
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 30 ರೂಪಾಯಿ ಇಳಿಕೆಯಾಗಿ 51,844 ರೂಪಾಯಿ ಆಗಿತ್ತು. ಬೆಳ್ಳಿ 50 ರೂಪಾಯಿಗಳಷ್ಟು ಏರಿಕೆಯಾಗಿ 57,414 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ. ಚಿನ್ನದ ವಹಿವಾಟು 51,793 ರೂಪಾಯಿಯೊಂದಿಗೆ ಆರಂಭವಾಗಿತ್ತು. ಬೆಳ್ಳಿ ದರ 57,398 ರೂಪಾಯಿ ಇತ್ತು.
ಸದ್ಯ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,550 ರೂಪಾಯಿ ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಎಷ್ಟು?
ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ. ರಷ್ಯಾ-ಉಕ್ರೇನ್ ನಡುವಣ ಉದ್ವಿಗ್ನತೆಯಿಂದಾಗಿ ಚಿನ್ನದ ಬೆಲೆಗಳ ಮೇಲೆ ಒತ್ತಡವಿದೆ. ಅಮೆರಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 1,772.72 ಡಾಲರ್ ಆಗಿದ್ದರೆ, ಬೆಳ್ಳಿಯ ಬೆಲೆ 19.88 ಡಾಲರ್‌ಗೆ ಇಳಿಕೆಯಾಗಿದೆ.