alex Certify ಆನೆ ಹಿಂಡಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಜನ: ನಂತರ ಆಗಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆ ಹಿಂಡಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಜನ: ನಂತರ ಆಗಿದ್ದೇನು ಗೊತ್ತಾ….?

ಜನರ ಗುಂಪೊಂದು ಆನೆಗಳ ಹಿಂಡಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಜನರು ರಸ್ತೆ ದಾಟಲು ಪ್ರಯತ್ನಿಸುತ್ತಿರುವ ಜಂಬೋ ಹಿಂಡಿನ ಹತ್ತಿರ ವಾಹನಗಳನ್ನು ನಿಲ್ಲಿಸಿ ಫೋಟೋಗಳನ್ನು ಕ್ಲಿಕ್ಕಿಸುತ್ತಿರುವುದು ಕಂಡುಬಂದಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ನೆಟ್ಟಿಗರನ್ನು ಕೆರಳಿಸಿದೆ.

ಹೌದು, ಆನೆಗಳ ಹಿಂಡಿನ ಜೊತೆ ಫೋಟೋಗಳನ್ನು ಕ್ಲಿಕ್ಕಿಸಲು ಗುಂಪೊಂದು ತಮ್ಮ ವಾಹನಗಳನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದ್ದಾರೆ. ಸೆಲ್ಫಿ ಕ್ಲಿಕ್ಕಿಸುತ್ತಾ ಇಬ್ಬರು ಹಿಂಡಿನ ಹತ್ತಿರ ಹೋಗಿದ್ದಾರೆ. ಈ ವೇಳೆ ಒಂದು ಆನೆ ಉದ್ರೇಕಗೊಂಡಿದೆ. ಈ ವೇಳೆ ಉಳಿದ ಆನೆಗಳು ಕೂಡ ಅದರೊಂದಿಗೆ ಸೇರಿಕೊಂಡು ಬೆನ್ನಟ್ಟಲು ಮುಂದಾಗಿದೆ. ಈ ವೇಳೆ ಅವರು ಭಯದಿಂದ ಓಡಿದ್ದಾರೆ. ಅದೃಷ್ಟವಶಾತ್ ಆನೆಗಳು ದಾಳಿ ಮಾಡುವ ಮನಸ್ಸು ಮಾಡದೇ ಇದ್ದಿದ್ದರಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡಿರುವ ವಿಡಿಯೋಗೆ, ವನ್ಯಜೀವಿಗಳೊಂದಿಗೆ ಸೆಲ್ಫಿ ಕ್ರೇಜ್ ಕೆಲವೊಮ್ಮೆ ಪ್ರಾಣಕ್ಕೆ ಎರವಾಗಬಹುದು. ಈ ಜನರು ಅದೃಷ್ಟವಂತರಾಗಿದ್ದಾರೆ. ದೈತ್ಯ ಜೀವಿಗಳಾಗಿದ್ದರೂ ಸೌಮ್ಯ ಪ್ರಾಣಿಗಳಾಗಿರುವುದರಿಂದ ದಾಳಿ ಮಾಡಲು ಮನಸ್ಸು ತೋರಿಲ್ಲ. ಬಲಿಷ್ಠ ಆನೆಗಳು ಜನರಿಗೆ ಪಾಠ ಕಲಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಶೀರ್ಷಿಕೆ ನೀಡಲಾಗಿದೆ.

ಈ ವಿಡಿಯೋ ವೈರಲ್ ಆಗಿದ್ದು, 63 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://www.indiatoday.in/trending-news/story/people-stop-car-midway-to-take-selfie-with-elephant-herd-what-happens-next-will-scare-you-1984831-2022-08-07

https://twitter.com/itsoutrageeyash/status/1555807756703404032?ref_src=twsrc%5Etfw%7Ctwcamp%5Etweetembed%7Ctwterm%5E1555807756703404032%7Ctwgr%5Ee1db97e67965a9badf64e93262e88eef36c3aa36%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpeople-stop-car-midway-to-take-selfie-with-elephant-herd-what-happens-next-will-scare-you-1984831-2022-08-07

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...