ನೀವು ಬಹುಶಃ ಹಲವಾರು ಪ್ರಸಿದ್ಧ ಸ್ಟಾಲ್ಗಳು ಮತ್ತು ಕೆಫೆಗಳಲ್ಲಿ ಚಹಾವನ್ನು ಆಸ್ವಾದಿಸಿರಬಹುದು. ಆದರೆ ಇಲ್ಲೊಂದೆಡೆ ತಯಾರಿಸುವ ಚಹಾ ರುಚಿಯನ್ನು ನೀವು ಬೇರೆಲ್ಲೂ ನೋಡಿರಲು ಸಾಧ್ಯವೇ ಇಲ್ಲ.
ಹೌದು, ಗುಜರಾತ್ನ ವಡೋದರಾದಲ್ಲಿ ಪ್ಲಾಸ್ಟಿಕ್ ಅಥವಾ ಮಣ್ಣಿನ ಕಪ್ಗಳಲ್ಲಿ ಚಹಾ ವಿತರಿಸುವುದಿಲ್ಲ. ಬದಲಾಗಿ ತಿನ್ನಬಹುದಾದ ಚಾಕೊಲೇಟ್-ರುಚಿಯ ಕಪ್ಗಳಲ್ಲಿ ಮಾರಾಟ ಮಾಡುವ ಸ್ಟಾಲ್ ಇದೆ. ಇದೊಂದು ರೀತಿ ಕೋನ್ ಐಸ್ಕ್ರೀಂ ರೀತಿ ಇದ್ದಂತೆ. ಚಹಾ ಕುಡಿದಾದ ಬಳಿಕ ಕಪ್ ಅನ್ನು ಎಸೆಯುವಂತಿಲ್ಲ. ಚಹಾ ಸೇವನೆ ಬಳಿಕ ಬಿಸ್ಕೆಟ್ ತಿನ್ನುವಂತೆ ಕಪ್ ಅನ್ನು ತಿನ್ನಬಹುದು.
ಅನಾಥಾಶ್ರಮದಲ್ಲಿ ಬೆಳೆದ ನಾಲ್ವರು ಸ್ನೇಹಿತರು ಈ ವಿಶಿಷ್ಟ ಪರಿಕಲ್ಪನೆಯೊಂದಿಗೆ ಹೊರತಂದಿದ್ದಾರೆ. ಬಾಲ್ಯದಿಂದಲೂ, ಲುವ್ಕುಶ್ ತನ್ನದೇ ಆದ ರೀತಿಯಲ್ಲಿ ಪರಿಸರಕ್ಕೆ ಕೊಡುಗೆ ನೀಡಲು ಬಯಸಿದ್ದರು. ಇದೀಗ ಈ ಸ್ನೇಹಿತರು ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಪ್ಲಾಸ್ಟಿಕ್ ಅನ್ನು ನಿಷೇಧಿಸಿದ ತಕ್ಷಣ, ನಾವು ಹೊಸದನ್ನು ಪ್ರಯತ್ನಿಸಲು ನಿರ್ಧರಿಸಿದೆವು. ಮರಗಳನ್ನು ಕಡಿದ ನಂತರ ತಯಾರಿಸಿದ ಪ್ಲಾಸ್ಟಿಕ್ ಜೊತೆಗೆ ಪೇಪರ್ ಕಪ್ಗಳೂ ಕೂಡ ಹಾನಿಕಾರಕ. ಹೀಗಾಗಿ ಈ ರೀತಿಯ ಆಲೋಚನೆ ಬಂದಿದ್ದಾಗಿ ಹೇಳಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಇಷ್ಟಪಟ್ಟಿದ್ದಾರೆ.