alex Certify ನಡೆದುಕೊಂಡು ಹೋಗುತ್ತಿದ್ದಾಗಲೇ ಬಂದೆರಗಿತ್ತು ಸಾವು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡೆದುಕೊಂಡು ಹೋಗುತ್ತಿದ್ದಾಗಲೇ ಬಂದೆರಗಿತ್ತು ಸಾವು….!

ಶಿವನನ್ನು ಆರಾಧಿಸುವ ಸಾವಿರಾರು ಭಕ್ತರು ಪ್ರತಿ ವರ್ಷ ಈ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಕನ್ವರಿಯಸ್ ಎಂದು ಕರೆಯಲ್ಪಡುವ ಈ ಭಕ್ತರು ಸಾಮಾನ್ಯವಾಗಿ ಗಂಗಾ ನದಿಯಿಂದ ನೀರು ಸಂಗ್ರಹಿಸಲು ನೂರಾರು ಕಿಲೋಮೀಟರ್ ನಡೆದು ಬರುತ್ತಾರೆ.

ಅಲ್ಲದೆ ಗಂಗಾ ನದಿಯ ನೀರನ್ನು ಸಂಗ್ರಹಿಸಿಕೊಂಡು ಹೋಗಿ ತಮ್ಮ ಊರುಗಳಲ್ಲಿ ಇರುವ ಶಿವನ ದೇವಾಲಯಗಳಿಗೆ ಅರ್ಪಿಸುತ್ತಾರೆ.

ಬರ್ವಾಹ್‌ನ ಖೇಡಿ ಘಾಟ್‌ನಲ್ಲಿ ನರ್ಮದಾ ನದಿಯಿಂದ ಮಡಿಕೆಗಳಲ್ಲಿ ನೀರು ತುಂಬಿಕೊಂಡು ತೀರ್ಥ ಯಾತ್ರೆಗೆ ಹೊರಟಿದ್ದ ಕನ್ವಾರಿಯಾಗಳ ಮೇಲೆ ಅಂದರೆ ಶಿವಭಕ್ತರ ಮೇಲೆ ವಾಹನ ಹರಿದು ಸ್ಥಳದಲ್ಲೆ ಇಬ್ಬರು ಮೃತಪಟ್ಟಿದ್ಧಾರೆ.

ಈ ಘಟನೆ ಮಧ್ಯಪ್ರದೇಶದ ಖಾರ್ಗೋನೆಯಲ್ಲಿ ಸಂಭವಿಸಿದೆ. ಮಧ್ಯಪ್ರದೇಶದ ರಂಗವಾಸಾ ನಿವಾಸಿಗಳಾದ ಬದ್ರಿಲಾಲ್ ಪಾಟಿದಾರ್ ಮತ್ತು ಮನೀಶ್ ದುಬೈ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.

ಟ್ರಕ್‌ ಹರಿದ ಪರಿಣಾಮ ಪಾಟಿದಾರ್‌ ಇವರ ದೇಹ ಪತ್ತೆಯೇ ಆಗದಂತೆ ನಜ್ಜುಗುಜ್ಜಾಗಿದೆ. ಇನ್ನೂ ಮನೀಶ್‌ ದುಬೆ ಕಾಲಿನ ಮೇಲೆ ವಾಹನ ಹತ್ತಿದ ಪರಿಣಾಮ ಮೃತಪಟ್ಟಿದ್ದಾರೆ. ಒಟ್ಟು 21 ಯಾತ್ರಿಗಳು ಯಾತ್ರೆ ಕೈಗೊಂಡಿದ್ದು, ಈ ಪೈಕಿ 16 ಮಂದಿ ತಮ್ಮ ಗಮ್ಯಸ್ಥಾನವನ್ನ ತಲುಪಿದ್ದಾರೆ. ಉಳಿದ ಐದು ಜನರು ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಇವರತ್ತ ನುಗ್ಗಿದಾಗ ಈ ಅವಘಡ ಸಂಭವಿಸಿದೆ. ಲಾರಿ ಚಾಲಕನನ್ನ ಸ್ಥಳೀಯ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಮೃತರ ದೇಹವನ್ನ ಘಟನಾ ಸ್ಥಳದಿಂದ ಹೊರತೆಗೆಯಲು ಎರಡು ಕ್ರೇನ್‌ಗಳನ್ನು ಬಳಸಲಾಗಿದೆ. ಶವಗಳನ್ನ ಬರ್ವಾ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅವರ ಸಂಬಂಧಿಕರಿಗೆ ಮೃತದೇಹವನ್ನ ಹಸ್ತಾಂತರಿಸಲಾಗಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...