ಪಶ್ಚಿಮಘಟ್ಟಕ್ಕೆ ಪ್ರಪಂಚದಲ್ಲೇ ಮಹತ್ವದ ಸ್ಥಾನವಿದೆ. ಪಶ್ಚಿಮಘಟ್ಟದ ದಟ್ಟ ಕಾಡಿನ ನಡುವೆ ಡ್ರೈವ್ ಮಾಡುವುದೇ ಒಂದು ಮಜಾ. ಅದರಲ್ಲೂ ಮಳೆಗಾಲದಲ್ಲಿ ಹಸಿರು ಹೊದ್ದ ಕಾಡಿನ ನಡುವೆ ದಾರಿ ಇನ್ನೊಂದಷ್ಟು ಸೊಬಗು ಹೆಚ್ಚಿಸಿಕೊಂಡಿರುತ್ತದೆ.
ಇಂತಹ ಸೊಬಗನ್ನು ವಿಡಿಯೋದಲ್ಲಿ ಸೆರೆ ಹಿಡಿದಿರುವ ಮಿಲನ್ ಎಂಬುವರು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ನೆಟ್ಟಿಗರು ಇದನ್ನು ಕಂಡು ಮೂಕ ವಿಸ್ಮಿತರಾಗಿದ್ದಾರೆ.
ಗುಜರಾತ್‌ನ ಸಂಗೀತ ನಿರ್ದೇಶಕ ಹಾಗೂ ಈವೆಂಟ್ ಮ್ಯಾನೇಜರ್ ಆಗಿರುವ ಮಿಲನ್, ಕರ್ನಾಟಕದಲ್ಲಿ ಹಾದು ಹೋಗುವ ಪಶ್ಚಿಮ ಘಟ್ಟದ ಸಾಲಿನಲ್ಲಿ ಡ್ರೈವ್ ಮಾಡಿದ್ದು, ಆ ವೇಳೆ ಚಿತ್ರೀಕರಿಸಿದ್ದಾರೆ.
ಮಾನ್ಸೂನ್‌ನಿಂದಾಗಿ ಪರಿಪೂರ್ಣ ಹಸಿರುಮಯ ವಾತಾವರಣದಲ್ಲಿ ಮಂಜು ಮುಸುಕಿದ ರಸ್ತೆಯಲ್ಲಿ ಅವರು ಸಾಗಿದ್ದು, ರಮಣೀಯವಾಗಿ ಕಾಣಿಸುತ್ತದೆ. ಇದನ್ನು ವೀಕ್ಷಿಸಿದ ನೆಟ್ಟಿಗರೂ ಸಹ ರೋಮಾಂಚನಗೊಂಡು ಕಾಮೆಂಟ್ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿ ಇದನ್ನು ಚಿತ್ರೀಕರಿಸಿದ್ದಾರೆ. ಅಲ್ಲಿ ಕಾಣುವ ಮಾಹಿತಿ ಫಲಕದಲ್ಲಿ ಈ ಸಂಗತಿಯನ್ನು ಪುಷ್ಟೀಕರಿಸುತ್ತದೆ.
https://www.instagram.com/p/CTH0qmOIek7/?utm_source=ig_embed&utm_campaign=embed_video_watch_again