ಈ ಬಾರಿ ನಿಗದಿತ ಸಮಯಕ್ಕೆ ರಾಜ್ಯದಲ್ಲಿ ಮುಂಗಾರು ಕಾಲಿಟ್ಟಿದ್ದರೂ ಸಹ ಆರಂಭದಲ್ಲಿ ಮಳೆ ಅಷ್ಟಾಗಿ ಆಗಿರಲಿಲ್ಲ. ಆ ನಂತರ ಭರ್ಜರಿ ಮಳೆಯಾಗಿದ್ದು ಹಳ್ಳಕೊಳ್ಳಗಳು, ಕೆರೆಕಟ್ಟೆಗಳು, ಜಲಾಶಯಗಳು ತುಂಬಿಕೊಂಡಿದ್ದವು. ಈಗಲೂ ಸಹ ಮಳೆ ಮುಂದುವರೆದಿದ್ದು ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಮಳೆ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಗುರುವಾರದಂದು ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಪಂಚರತ್ನ ಯೋಜನೆಗಲ್ಲಿ ಒಂದಾದ ‘ಜನತಾ ಜಲಧಾರೆ’ಯನ್ನು ರಾಜ್ಯದಲ್ಲಿ ಮಾಡಿದ ಪರಿಣಾಮ ಭಾರಿ ಮಳೆಯಾಗುತ್ತಿದೆ ಎಂದು ಹೇಳಿದ್ದಾರೆ.
ಅಲ್ಲದೆ ಯುವಕ – ಯುವತಿಯರಿಗೆ ಉದ್ಯೋಗದ ಭರವಸೆ ಸೇರಿದಂತೆ ಹಲವಾರು ಯೋಜನೆಗಳು ಪಂಚರತ್ನದಲ್ಲಿದೆ ಎಂದು ಹೇಳಿದ ಹೆಚ್.ಡಿ. ಕುಮಾರಸ್ವಾಮಿಯವರು, ರಾಜ್ಯದ ಜನತೆ ಆಶೀರ್ವಾದ ಇದ್ದರೆ 2023ರಲ್ಲಿ ಮತ್ತೆ ನಾನು ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.