ಚೈನ್ ಅಗತ್ಯವಿಲ್ಲದ ಮತ್ತು ಪೆಡಲ್ ಬಳಕೆಯಿಂದ ಓಡುವ ಸೈಕಲ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಸೈಕಲ್ ತುಳಿಯುತ್ತಿರುವುದನ್ನು ಕಾಣಬಹುದು. ಅದು ಚೈನ್ ಇಲ್ಲದೆಯೂ ಮುಂದೆ ಸಾಗುತ್ತದೆ. ಸಾಮಾನ್ಯವಾಗಿ ಚೈನ್ ಮೂಲಕವೇ ಸೈಕಲ್ ಮುಂದೆ ಸಾಗುವುದು, ಈ ವಿಡಿಯೋದಲ್ಲಿ ಕಾಣಿಸುವ ಸೈಕಲ್ ನಲ್ಲಿ ಚೈನ್ಗೆ ಪ್ರಾಮುಖ್ಯತೆಯೇ ಇಲ್ಲದಂತೆ ಟೆಕ್ನಿಕ್ ಬಳಸಲಾಗಿದೆ. ಟೈರ್ಗಳನ್ನು ಪೆಡಲ್ ನೇರವಾಗಿ ಜೋಡಿಸಲಾಗಿದೆ. ಸವಾರನು ಪೆಡಲ್ಗಳನ್ನು ಸುತ್ತಬೇಕಿಲ್ಲ.
ಈ ವಿಡಿಯೋವನ್ನು ತನ್ಸು ಯೆಗೆನ್ ಎಂಬ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದು, “ಚೈನ್ ಲೆಸ್ ಬೈಸಿಕಲ್” ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಇದುವರೆಗೆ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ವೀಕ್ಷಕರು ಅದರ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ಟೆಕ್ನಿಕ್ ಕಡಿಮೆ ಶ್ರಮದಿಂದ ವೇಗವಾಗಿ ಹೋಗಲು ಸಾಧ್ಯವಾಗುತ್ತದೆ. ಸೊಂಟ, ಮೊಣಕಾಲುಗಳು ಬಾಗುವಿಕೆಯನ್ನು ಸಹ ಕಡಿಮೆ ಮಾಡುತ್ತದೆ.