ಬೀದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹೋರಿಗಳು ಪರಸ್ಪರ ಗುದ್ದಾಡುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಅದು ಜನರಿಗೆ ಮನರಂಜನೆಯೂ ಆಗಿರಬಹುದು. ಆದರೆ, ಅಂತಹ ಹೋರಿಗಳು ಅಂಗಡಿಯೊಳಗೆ ನುಗ್ಗಿದರೆ ಅಂಗಡಿ ಮಾಲಿಕನ ಸ್ಥಿತಿ ಏನಾಗಬೇಡ ?
ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೊಂದು ವಿಡಿಯೋ ವೈರಲ್ ಆಗಿದೆ. ಎರಡು ಹೋರಿಗಳು ಬೀದಿಗಳಲ್ಲಿ ಕಾದಾಡುತ್ತಿದ್ದು, ಇದ್ದಕ್ಕಿದ್ದಂತೆ ಅವು ಅಂಗಡಿಯೊಂದಕ್ಕೆ ನುಗ್ಗುತ್ತದೆ, ಇದು ಅಂಗಡಿಯ ಮಾಲೀಕನನ್ನು ತಬ್ಬಿಬ್ಬುಗೊಳಿಸುತ್ತದೆ. ಮತ್ತು ಭಯಭೀತರನ್ನಾಗಿ ಮಾಡುತ್ತದೆ.
ಯೋಗೇಶ್ ಕುರೀಲ್ ಎಂಬುವರು ಫೇಸ್ಬುಕ್ನಲ್ಲಿ ಎರಡು ಹೋರಿಗಳು ದೊಡ್ಡ ಕಾಳಗಕ್ಕೆ ಅಂಗಡಿಯನ್ನೇ ಅಖಾಡವಾಗಿಸಿಕೊಂಡವು ಎಂಬ ಶೀರ್ಷಿಕೆಯೊಂದಿಗೆ ಸಿಸಿ ಟಿವಿ ದೃಶ್ಯವನ್ನು ಹಂಚಿಕೊಂಡಿದ್ದಾರೆ.
ಆರಂಭದಲ್ಲಿ ಅಲ್ಲೇನು ನಡೆಯುತ್ತಿದೆ ಎಂದು ಗೊತ್ತಾಗುವುದಿಲ್ಲ. ನಂತರ ಗೂಳಿಯೊಂದು ನುಗ್ಗಿ ಅಂಗಡಿಯವನನ್ನು ಸಂರ್ಪೂಣವಾಗಿ ಗಾಬರಿಗೊಳಿಸಿತು. ನಂತರ ಅದರ ಮೇಲೆ ನೀರಿನ ಬಾಟಲಿಯನ್ನು ಬಳಸಿ ಅದನ್ನು ಓಡಿಸಲು ಪ್ರಯತ್ನಿಸುತ್ತಾನೆ. ಆದರೆ, ಅವನ ತಂತ್ರವು ಕೆಲಸ ಮಾಡುವ ಮೊದಲೇ ಮತ್ತೊಂದು ಗೂಳಿ ಬಾಗಿಲಿನಿಂದ ಒಳಕ್ಕೆ ನುಗ್ಗಿ ಜಗಳ ಶುರುಮಾಡಿತು.
ಅಂಗಡಿಯವನು ಆ ಎರಡೂ ಗೂಳಿಗಳನ್ನು ಓಡಿಸಲು ಅಸಹಾಯಕನಾಗಿ ಪ್ರಯತ್ನಿಸುತ್ತಾನೆ. ಅವನು ಪ್ರಾಣಿಗಳನ್ನು ಯಶಸ್ವಿಯಾಗಿ ಓಡಿಸಿದನೇ ಎಂದು ತಿಳಿಸದೆಯೇ ವಿಡಿಯೊ ಥಟ್ಟನೆ ಕೊನೆಗೊಂಡಿದೆ.
ವಿಡಿಯೋ ನೋಡಿದ ಹಲವು ಜಾಲತಾಣ ಬಳಕೆದಾರರು ರಸ್ತೆಯಲ್ಲಿ ಜಾನುವಾರುಗಳು ಸ್ವಚ್ಛಂದವಾಗಿ ಓಡಾಡುತ್ತಿರುವ ಬಗ್ಗೆ ಚರ್ಚಿಸಿದರೆ ಇನ್ನು ಕೆಲವರು ಅಂಗಡಿಗೆ ಹಾನಿಯಾಗಿದೆಯೇ ಅಥವಾ ಇಲ್ಲವೇ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ