ಧೂಮಪಾನ ಆರೋಗ್ಯಕ್ಕೆ ಮಾರಕ. ಇದರಿಂದ ಕ್ಯಾನ್ಸರ್ ನಂಥ ಮಾರಕ ಖಾಯಿಲೆ ಬರುತ್ತದೆ. ಹೊಸ ಸಂಶೋಧನೆ ಪ್ರಕಾರ ಧೂಮಪಾನ ಚರ್ಮಕ್ಕೂ ಹಾನಿಕರ. ಇದು ಸೋರಿಯಾಸಿಸ್ ಖಾಯಿಲೆಗೆ ಕಾರಣವಾಗಬಹುದು ಎಂದಿದ್ದಾರೆ ವೈದ್ಯರು.
ಸಂಶೋಧನೆಯಲ್ಲಿ ಅದರಲ್ಲೂ ಮಹಿಳೆಯರಲ್ಲಿ ಈ ಸಾಧ್ಯತೆ ಜಾಸ್ತಿ. ಸಿಗರೇಟ್ ಸೇದದವರಿಗಿಂತ ಧೂಮಪಾನಿ (ದಿನವೊಂದಕ್ಕೆ 20 ಸಿಗರೇಟ್ ಸೇದುವ)ಮಹಿಳೆಯರಲ್ಲಿ ಸೋರಿಯಾಸಿನ್ ಬರುವ ಸಾಧ್ಯತೆ ಎರಡೂವರೆ ಪಟ್ಟು ಹೆಚ್ಚು. ಅದೇ ಪುರುಷರಲ್ಲಿ ಒಂದೂವರೆ ಪಟ್ಟು ಹೆಚ್ಚು.
ಧೂಮಪಾನದಲ್ಲಿರುವ ನಿಕೊಟಿನ್, ನಿಕೆಲ್ ನಂಥ ಅಂಶಗಳು ಸೋರಿಯಾಸಿಸ್ ನಂಥ ಖಾಯಿಲೆಗೆ ಕಾರಣವಾಗುತ್ತವೆ. ಸೋರಿಯಾಸಿಸ್ ನಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿರುತ್ತದೆ. ಆಗ ಧೂಮಪಾನ ಮಾಡಿದಲ್ಲಿ ಅದು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ಧೂಮಪಾನ ಮಾಡುವುದರಿಂದ ಚರ್ಮದಲ್ಲಿನ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದ ತ್ವಚೆ ಒಣಗಿ ತುರಿಕೆ ಉಂಟಾಗುತ್ತದೆ.