ಮಹಿಳೆಯರು ಒಂದೆಡೆ ಸೇರಿದ್ರೆ ಏನು ಮಾತಾಡ್ತಾರೆ ಅಂತಾ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಲ್ಲರಿಗೂ ಗೊತ್ತು. ಸೀರೆಯಿಂದ ಹಿಡಿದು ಅಡುಗೆ, ಮನೆ, ಮಕ್ಕಳು ಎಲ್ಲ ವಿಚಾರ ಬಂದು ಹೋಗುತ್ತೆ.
ಆದ್ರೆ ಪುರುಷರು ಒಂದೆಡೆ ಸೇರಿದಾಗ ಏನು ಮಾತಾಡ್ತಾರೆ ಎನ್ನುವ ಕುತೂಹಲ ಕೆಲವರಿಗಿದೆ. ಸಾಮಾನ್ಯವಾಗಿ ಪುರುಷರು ಅನೇಕ ವಿಷಯಗಳನ್ನು ಮಹಿಳೆಯರ ಮುಂದೆ ಹೇಳಿಕೊಳ್ಳುವುದಿಲ್ಲ. ಅವರ ಕೆಲವು ಸಮಸ್ಯೆಗಳು ಮಹಿಳೆಯರಿಗೆ ಅರ್ಥವಾಗುವುದಿಲ್ಲ. ಒಬ್ಬ ಪುರುಷ ಮಾತ್ರ ಮತ್ತೊಬ್ಬ ಪುರುಷನ ಸಮಸ್ಯೆಯನ್ನು ತಿಳಿಯಲು ಸಾಧ್ಯವಂತೆ. ಹಾಗಾಗಿ ಅವರು ತಮ್ಮದೇ ಗುಂಪಿನಲ್ಲಿ ಆ ವಿಷಯದ ಬಗ್ಗೆ ಚರ್ಚೆ ಮಾಡ್ತಾರೆ.
ಪುರುಷರು ಒಂದಾದಾಗ ಸಾಮಾನ್ಯವಾಗಿ ಮಹಿಳೆಯರ ವಿಚಿತ್ರ ನಡವಳಿಕೆಗಳ ಬಗ್ಗೆ ಮಾತನಾಡ್ತಾರಂತೆ.
ಉದಾಹರಣೆಗೆ: ಶಾಪಿಂಗ್ ವೇಳೆ ಆಕೆಯ ನಡವಳಿಕೆಗಳ ಬಗ್ಗೆ ಇನ್ನೊಬ್ಬ ಪುರುಷನ ಬಳಿ ಹೇಳಿಕೊಳ್ತಾರಂತೆ. ಟಿವಿಯಲ್ಲಿ ಬರುವ ಕ್ರಿಕೆಟ್ ಮ್ಯಾಚ್ ಅಂದ್ರೆ ಪುರುಷರಿಗೆ ಪಂಚಪ್ರಾಣ. ಇದನ್ನು ನೋಡಲು ಅವರು ಪಾರ್ಟಿ, ಕೆಲಸ ಕೂಡ ಬಿಡ್ತಾರೆ. ಈ ಸಮಯದಲ್ಲಿ ಮಡದಿ ಬಂದು ಯಾವುದಾದ್ರೂ ಕಾರ್ಯಕ್ರಮಕ್ಕೆ ಹೋಗೋಣ ಎಂದ್ರೆ ಕೋಪ ನೆತ್ತಿಗೇರುತ್ತೆ. ಇದನ್ನು ಇನ್ನೊಬ್ಬ ಪುರುಷ ಸಿಕ್ಕಾಗ ಖಂಡಿತವಾಗಿ ಹೇಳಿಕೊಳ್ತಾನೆ ಆತ. ಪುರುಷರು ಸದಾ ಶಾರೀರಿಕ ಸಂಬಂಧ ಹೊಂದಲು ಸಿದ್ಧರಿರ್ತಾರೆ. ಮಡದಿ ಅಥವಾ ಗರ್ಲ್ ಫ್ರೆಂಡ್ ಕೂಡ ಹಾಗೆ ಇರಬೇಕು ಎನ್ನುವುದು ಪುರುಷನ ಬಯಕೆ. ಜೊತೆಗೆ ಹೊಸ ಹೊಸ ಪ್ರಯೋಗವೆಂದ್ರೆ ಅವರಿಗೆ ಇಷ್ಟ. ಪುರುಷರೇ ಇದ್ದಾಗ ಈ ವಿಷಯದ ಬಗ್ಗೆ ಚರ್ಚೆ ನಡೆಯುತ್ತೆ.
ಸಾಮಾನ್ಯವಾಗಿ ಊಟ, ತಿಂಡಿ, ಟಿವಿ ಹೀಗೆ ಕೆಲವೊಂದಕ್ಕೆ ತಮ್ಮದೇ ಸಮಯ ನಿಗದಿ ಮಾಡಿಕೊಂಡಿರುತ್ತಾನೆ ಪುರುಷ. ಅದನ್ನು ಮೀರಿ ಬೇರೆಯವರು ಹೇಳಿದಂತೆ ಕೇಳಬೇಕು. ಇಲ್ಲ ಬೇರೆಯವರಿಗೆ ಸಮಯ ಮೀಸಲಿಡಬೇಕೆಂದ್ರೆ ಪುರುಷನಿಗೆ ಇಷ್ಟವಾಗುವುದಿಲ್ಲ. ಅವರ ಈ ಸಮಸ್ಯೆಯನ್ನು ಇನ್ನೊಬ್ಬ ಪುರುಷ ಮಾತ್ರ ಅರ್ಥ ಮಾಡಿಕೊಳ್ಳಬಲ್ಲ.
ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡ್ತಾರೆ ಪುರುಷರು. ಮನೆ ಮುಂದೆ ಸುಂದರವಾದ ಹುಡುಗಿ ವಾಸಿಸಲು ಬಂದ್ರಂತೂ ಮುಗಿದೇ ಹೋಯ್ತು. ಅವಳು ತನ್ನನ್ನು ಹೊಗಳಬೇಕು ಎಂದು ಅನೇಕ ಪುರುಷರು ಬಯಸ್ತಾರೆ. ಹುಡುಗರ ಸಂಭಾಷಣೆಯಲ್ಲಿ ಇದೊಂದು ಆಕರ್ಷಣೆಯ ವಿಷಯ ಅಂದ್ರೆ ತಪ್ಪಾಗಲಾರದು. ತಮ್ಮ ಕುಟುಂಬದ ಸದಸ್ಯರ ಬಗ್ಗೆ ಯಾರು ಮಾತನಾಡಿದ್ರೂ ಕೋಪ ನೆತ್ತಿಗೇರುತ್ತದೆ. ಅದೇ ಪತ್ನಿ ಅಥವಾ ಗರ್ಲ್ ಫ್ರೆಂಡ್ ಮನೆಯವರ ಕೆಲ ನಡವಳಿಕೆ ಈತನಿಗೆ ಇಷ್ಟವಾಗುವುದಿಲ್ಲ. ಅಲ್ಲಾದ ಕಿರಿಕಿರಿಯನ್ನು ಸ್ನೇಹಿತರ ಜೊತೆ ಅವಶ್ಯವಾಗಿ ಚರ್ಚೆ ಮಾಡ್ತಾನೆ. ಪುರುಷರು ಅನೇಕ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡಿರುವುದಿಲ್ಲ. ಪ್ರೇಯಸಿಯ ಬರ್ತ್ ಡೇಯಿಂದ ಹಿಡಿದು ಮದುವೆ ದಿನದ ದಿನಾಂಕದವರೆಗೆ ನೆನಪಿಡುವುದು ಅವರಿಗೆ ಕಷ್ಟ. ಇದು ಸಿನಿಮಾದಲ್ಲಿ ಮಾತ್ರ ಸಾಧ್ಯ ಎನ್ನುವ ಅವರ ಸಮಸ್ಯೆಯನ್ನು ಇನ್ನೊಬ್ಬ ಪುರುಷ ಮಾತ್ರ ಅರ್ಥ ಮಾಡಿಕೊಳ್ಳಬಲ್ಲ.